Select Your Language

Notifications

webdunia
webdunia
webdunia
webdunia

ಅಮ್ಮನ ಬಾಲ ಹಿಡಿದು ಪುಟಾಣಿಗಳ ತುಂಟಾಟ..!

ಅಮ್ಮನ ಬಾಲ ಹಿಡಿದು ಪುಟಾಣಿಗಳ ತುಂಟಾಟ..!
bangalore , ಗುರುವಾರ, 18 ಆಗಸ್ಟ್ 2022 (20:01 IST)
ತನ್ನ ಮರಿಗಳೊಂದಿಗೆ ಇರುವ ಸಿಂಹಿಣಿ ಕೊಳದಲ್ಲಿ ನೀರು ಕುಡಿಯುತ್ತಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಅಮ್ಮ ನೀರು ಕುಡಿಯುತ್ತಿದ್ದರು ಪುಟಾಣಿಗಳು ಆಟದಲ್ಲಿ ಮಗನಾಗಿದ್ದರು. ಬರೀ ಅಷ್ಟೇ ಅಲ್ಲ, ಅಮ್ಮನ ಬಾಲವನ್ನು ಹಿಡಿದುಕೊಂಡು ಇವುಗಳು ಆಟದ ಖುಷಿಯನ್ನು ಅನುಭವಿಸುತ್ತಿದ್ದವು. ಈ ದೃಶ್ಯವನ್ನು ನೋಡುವಾಗಲೇ ಖುಷಿಯಾಗುತ್ತದೆ. ಜೊತೆಗೆ, ಅಮ್ಮನ ತಾಳ್ಮೆ ಕೂಡ ಮನಸ್ಸಿಗೆ ಆನಂದವಾಗುತ್ತದೆ. ತನಗೆ ಕಿರಿಕಿರಿಯಾದರೂ ಅಮ್ಮ ಯಾವುದೇ ಚಿಂತೆ ಮಾಡಲ್ಲ. ಬದಲಾಗಿ, ಪುಟಾಣಿಗಳ ಸುರಕ್ಷತೆಯತ್ತ ಗಮನ ಹರಿಸುವ ಇವಳು ಸುತ್ತಲೂ ದಿಟ್ಟಿಸುತ್ತಾ ಮರಿಗಳತ್ತ ತನ್ನ ಗಮನವನ್ನು ಗಮನಿಸುತ್ತಿರುತ್ತಾಳೆ. ಜಗತ್ತನ್ನು ಆಸಕ್ತಿಯಿಂದ ಕಣ್ಣಿನಿಂದ ನೋಡುವ ಈ ಪುಟಾಣಿಗಳಿಗೆ ಪ್ರತಿ ಕ್ಷಣವೂ ಕುತೂಹಲವೇ. ಇಂತಹ ಪುಟಾಣಿಗಳ ಆಟದ ಕ್ಷಣ ಇನ್ನೂ ಸುಂದರ. ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಾಂತ ನಂದ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮ್ಮನ ಜೊತೆ ಮರಿಗಳ ತುಂಟಾಟ..!