Select Your Language

Notifications

webdunia
webdunia
webdunia
webdunia

ಬಿಎಸ್‌‌ವೈಗೆ ತಾಕತ್ತಿದ್ರೆ ಬಿಜೆಪಿ ಕಚೇರಿಯಲ್ಲಿ ಬಸವಣ್ಣನ ಫೋಟೋ ಹಾಕಲಿ: ಸಚಿವ ವಿನಯ್

ಬಿಎಸ್‌‌ವೈಗೆ ತಾಕತ್ತಿದ್ರೆ ಬಿಜೆಪಿ ಕಚೇರಿಯಲ್ಲಿ ಬಸವಣ್ಣನ ಫೋಟೋ ಹಾಕಲಿ: ಸಚಿವ ವಿನಯ್
ಹುಬ್ಬಳ್ಳಿ: , ಮಂಗಳವಾರ, 25 ಜುಲೈ 2017 (19:10 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ತಾಕತ್ತಿದ್ರೆ ಬಿಜೆಪಿ ಕಚೇರಿಯಲ್ಲಿ ಬಸವಣ್ಣನ ಫೋಟೋ ಹಾಕಲಿ ಎಂದು ಸಚಿವ ವಿನಯ್ ಕುಲ್ಕರ್ಣಿ ಸವಾಲ್ ಹಾಕಿದ್ದಾರೆ.
 
ಕಾಂಗ್ರೆಸ್ ಪಕ್ಷ ಮಾತ್ರ ಬಸವಣ್ಣನ ತತ್ವಗಳನ್ನು ಅನುಸರಿಸುತ್ತಿದೆ. ಇತರ ಯಾವ ಪಕ್ಷಗಳು ಬಸವಣ್ಣನ ತತ್ವಗಳ ಪರಿಪಾಲನೆಯಾಗುತ್ತಿಲ್ಲ. ಬಿಎಸ್‌ವೈ ಆರೆಸ್ಸೆಸ್ ಕಪಿಮುಷ್ಠಿಯಲ್ಲಿ ಸಿಲುಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
 
ಪ್ರತ್ಯೇಕ ಧರ್ಮ ಕೇಳುವುದು ನಮ್ಮ ಹಕ್ಕು. ಆದ್ದರಿಂದ ನಾವು ಕೇಳುತ್ತಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
ಬಿಜೆಪಿ ಮತ್ತು ಆರೆಸ್ಸೆಸ್ ಸಮಾನತೆಯ ವಿರೋಧಿಗಳು. ಯಡಿಯೂರಪ್ಪ ಬಿಜೆಪಿಯಲ್ಲಿರುವುದರಿಂದ ಬಸವಣ್ಣನವರ ತತ್ವಗಳನ್ನು ವಿರೋಧಿಸುತ್ತಿದ್ದಾರೆ. ಇಲ್ಲವಾದಲ್ಲಿ ಅವರು ಒಪ್ಪಿಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ವಿಭಜನೆಯಾದರೆ ಎರಡೂ ಧರ್ಮಕ್ಕೂ ನಷ್ಟ: ಪೇಜಾವರ ಶ್ರೀ