Publish Date: Thu, 04 Aug 2022 (12:58 IST)
Updated Date: Thu, 04 Aug 2022 (13:01 IST)
ಬೆಂಗಳೂರು : ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬಂದಿದ್ದು, ಬಿಜೆಪಿ ನಾಯಕರಿಗೆ ಶಾಕ್ ನೀಡಿದೆ.
ನಿರೀಕ್ಷೆಗೂ ಮೀರಿ 10 ಲಕ್ಷ ಜನ ಸೇರಿದ್ದಕ್ಕೆ ರಾಜ್ಯ ಬಿಜೆಪಿ ನಾಯಕರು ಆತಂಕ್ಕೀಡಾಗಿದ್ದಾರೆ. ಈ ಬೆನ್ನಲ್ಲೇ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಿಗಿಂತಲೂ ಮೊದಲೇ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಬಿಜೆಪಿ ಹೈಕಮಾಂಡ್ಗೆ ರಿಪೋರ್ಟ್ ಕೊಟ್ಟಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಸಿದ್ದರಾಮೋತ್ಸವ ಮಾಸ್ ಸಮಾವೇಶ ಚುನಾವಣಾ ಪ್ರಚಾರದ ದಿಕ್ಕು ಬದಲಿಸಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಹೊಂದಾಣಿಕೆಯಾದ್ರೆ ಬಿಜೆಪಿಗೆ ಮುಂದೆ ಕಷ್ಟವಾಗಲಿದೆ.
ನಿನ್ನೆಯ 10 ಲಕ್ಷಕ್ಕೂ ಹೆಚ್ಚು ಜನಸಾಗರ ಸೇರಿದೆ. ಕಾಂಗ್ರೆಸ್ ಕೂಡ ಇಷ್ಟು ಜನಸ್ತೋಮವನ್ನು ನಿರೀಕ್ಷೆ ಮಾಡಿರಲಿಲ್ಲ. ಹೀಗಾಗಿ ಪರಿಣಾಮಕಾರಿ ತಂತ್ರಗಾರಿಕೆ ಅಗತ್ಯವೆಂದು ಬಿಎಸ್ವೈ ಹೇಳಿದ್ದಾರೆ.