Publish Date: Wed, 24 May 2017 (14:00 IST)
Updated Date: Wed, 24 May 2017 (14:02 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಏನೇ ಮಾಡಿದ್ರೂ ಅಧಿಕಾರ ಸಿಗಲ್ಲ. ಅವರಿಗೆ ಅವರ ಪಕ್ಷದ ಪಾಲಿಸಿಯಂತೆ ಮಾರ್ಗದರ್ಶಕ ಮಂಡಳಿಯಲ್ಲಿ ಮಾತ್ರ ಸ್ಥಾನ ದೊರೆಯಲಿದೆ ಎಂದು ಜಲಸಂಪನ್ಮೂಲ ಖಾತೆ ಸಚಿವ ಎಂ.ಬಿ.ಪಾಟೀಲ್ ಲೇವಡಿ ಮಾಡಿದ್ದಾರೆ.
ಆಡ್ವಾಣಿ, ಜಸ್ವಂತ್ ಸಿಂಗ್, ಮುರಳಿ ಮನೋಹರ್ ಜೋಷಿ ಅವರಿಗೆ ಏನಾಯಿತು? 75 ವರ್ಷ ದಾಟಿದ ಹಿನ್ನೆಲೆಯಲ್ಲಿ ಅವರಿಗೆ ಮಾರ್ಗದರ್ಶಕರ ಪಟ್ಟಿಯಲ್ಲಿ ಸ್ಥಾನ ದೊರೆತಿದೆ. ಅದರಂತೆ, ಯಡಿಯೂರಪ್ಪ ವಯಸ್ಸು ಕೂಡಾ 75 ವರ್ಷ ದಾಟಿದ್ದರಿಂದ ಮಾರ್ಗದರ್ಶಕ ಸ್ಥಾನ ಗ್ಯಾರೆಂಟಿಯಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಮೊದಲು ಪ್ರಭಾವಿ ಸಚಿವರ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಲಿಂಗಾಯುತ ಎನ್ನುವ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ಇದೀಗ 4-5 ಲಿಂಗಾಯುತ ಸಚಿವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದರು.
ಐಟಿ ಅಧಿಕಾರಿಗಳು ಬಂದಲ್ಲಿ ಅವರಿಗೆ ಹೂ ಗುಚ್ಚ ನೀಡಿ ಸ್ವಾಗತಿಸುತ್ತೇನೆ. ನನಗೆ ಲಿಂಗಾಯುತ ಸಮುದಾಯದ ಬೆಂಬಲವಿದೆ. ಇಂತಹ ಬೆದರಿಕೆಗಳಿಗೆ ನಾನು ಮಣಿಯುವುದಿಲ್ಲ ಎಂದು ಗುಡುಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.