Publish Date: Sat, 20 Oct 2018 (09:55 IST)
Updated Date: Sat, 20 Oct 2018 (09:57 IST)
ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮ ಮಾಡಲು ಹೊರಟೇ ತಮ್ಮ ಹಿಂದಿನ ಸರ್ಕಾರ ತಪ್ಪು ಮಾಡಿತು ಎಂದು ಸಚಿವ ಡಿಕೆ ಶಿವಕುಮಾರ್ ನೀಡಿದ್ದ ಹೇಳಿಕೆಗೆ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಅಚ್ಚರಿಯ ಪ್ರತಿಕ್ರಿಯೆ ನೀಡಿದ್ದಾರೆ.
‘ಬೀದರ್ ನ ಐದು ಶಾಸಕರಲ್ಲಿ ನಾಲ್ವರೂ ಕಾಂಗ್ರೆಸ್ ನವರೇ. ಹೀಗಾಗಿ ಈ ಕಾರಣಕ್ಕೆ ಇಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿತು ಎಂದರೆ ಒಪ್ಪುವ ಮಾತಲ್ಲ. ಕಾಂಗ್ರೆಸ್ ಸೋಲಿಗೆ ಬೇರೆಯದೇ ಕಾರಣಗಳಿವೆ. ಡಿಕೆಶಿ ಹೇಳಿಕೆಯೇ ವಿಚಿತ್ರವಾಗಿದೆ’ ಎಂದು ಯಡಿಯೂರಪ್ಪ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನೊಂದೆಡೆ ಪ್ರತ್ಯೇಕ ಧರ್ಮ ಹೋರಾಟದ ಮುಂಚೂಣಿ ವಹಿಸಿದ್ದ ಶಾಸಕ ಎಂಬಿ ಪಾಟೀಲ್ ಡಿಕೆಶಿ ಎಲ್ಲಾ ವಿಚಾರದಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅವರು ರಾಹುಲ್ ಗಾಂಧಿಗಿಂತ ದೊಡ್ಡವರಲ್ಲ. ಈ ಬಗ್ಗೆ ಹೈಕಮಾಂಡ್ ಗೆ ವರದಿ ನೀಡುವೆ ಎಂದು ಕಿಡಿ ಕಾರಿದ್ದಾರೆ. ಅಂತೂ ಸುಖಾಸುಮ್ಮನೇ ಡಿಕೆಶಿ ವಿವಾದವೊಂದನ್ನು ಮೈಮೇಲೆಳೆದುಕೊಂಡಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.