ದಲಿತ ಕುಟುಂಬದವರನ್ನು ಮನೆಗೆ ಕರೆಸಿ ಬಿಎಸ್ ವೈ ಸತ್ಕಾರ

Webdunia
ಸೋಮವಾರ, 28 ಆಗಸ್ಟ್ 2017 (11:04 IST)
ಬೆಂಗಳೂರು: ಚುನಾವಣೆ ಹತ್ತಿರಬರುತ್ತಿದ್ದಂತೆ ಬಿಜೆಪಿ ದಲಿತರ ಓಲೈಕೆಗೆ ಮುಂದಾಗಿದೆ. ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮನೆಯಲ್ಲಿ ಇಂದು ದಲಿತ ಕುಟುಂಬದವರಿಗೆ ಸತ್ಕಾರ ನಡೆಯಲಿದೆ.

 
ಹಿಂದೆ ಬಿಎಸ್ ವೈ ತಮ್ಮ ಆಪ್ತರೊಂದಿಗೆ ಕೆಲವು ದಲಿತ ಕುಟುಂಬದವರ ಮನೆಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿದ್ದರಲ್ಲದೆ, ಅವರ ಜತೆ ಕೂತು ಉಪಾಹಾರ ಸೇವಿಸಿದ್ದರು. ಇದೀಗ ಅದೇ ದಲಿತ ಕುಟುಂಬದವರನ್ನು ತಮ್ಮ ಮನೆಗೆ ಆಹ್ವಾನಿಸಿ ಸತ್ಕರಿಸುತ್ತಿದ್ದಾರೆ.

ಹೋಳಿಗೆ, ಎರಡು ಬಗೆ ಪಲ್ಯ, ಸಾಂಬಾರ್, ರಸಂ ಎಂದು ಭರ್ಜರಿ ಅಡುಗೆಯೇ ಬಿಎಸ್ ವೈ ಮನೆಯಲ್ಲಿ ಸಿದ್ಧವಾಗುತ್ತಿದೆ. ಸ್ವತಃ ಬಿಎಸ್ ವೈ ಕುಟುಂಬದವರೇ ಈ ಅಡುಗೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.  33 ದಲಿತ ಕುಟುಂಬಗಳ ಜತೆ ಬಿಎಸ್ ವೈ ಭೋಜನ ಸವಿಯಲಿದ್ದಾರೆ.

ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿರುವ ಬಿಎಸ್ ವೈ ಮನೆಗೆ ಇಂದು ದಲಿತ ಕುಟುಂಬದವರು ಬರಲಿದ್ದಾರೆ. ಇವರಿಗೆ ಬಿಎಸ್ ವೈ ವಿಶೇಷ ಆತಿಥ್ಯ ನೀಡುತ್ತಿದ್ದಾರೆ.

ಇದನ್ನೂ ಓದಿ.. ಉಪೇಂದ್ರ ಮಗಳೂ ಬಣ್ಣ ಹಚ್ಚಲಿದ್ದಾಳೆ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಲ್ಲೆಂದರಲ್ಲಿ ಕಸ ಎಸೆದರೆ ಎಚ್ಚರ: ಇನ್ನು ಮುಂದೆ ರಸ್ತೆರಸ್ತೆಯಲ್ಲೂ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು

ಗ್ರಾಹಕರಿಗೆ ಗುಡ್‌ನ್ಯೂಸ್‌: ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಬೆಲೆ ಇಂದಿನಿಂದಲೇ ಕೊಂಚ ಅಗ್ಗ

ಆರ್ ಎಸ್ಎಸ್ ಪಂಥಸಂಚಲನಕ್ಕೆ ಅನುಮತಿ ಬೇಕು, ಎಂಇಎಸ್ ಪುಂಡರಿಗೆ ಇದು ಅಪ್ಲೈ ಆಗಲ್ವಾ

ಮತ್ತೊಂದು ಕಾಲ್ತುಳಿತ: ಇತಿಹಾಸ ಪ್ರಸಿದ್ಧ ಕ್ಷೇತ್ರದಲ್ಲಿ ದೇವರದರ್ಶನದ ನೂಕುನುಗ್ಗಲಿನಲ್ಲಿ 9 ಮಂದಿ ಸಾವು

ಮೋದಿ ವಿರುದ್ಧ ಸದಾ ಕೆಂಡಕಾರುತ್ತಿದ್ದ ಸಂಜಯ್ ರಾವತ್ ಗೆ ಏನಾಗಿದೆ ನೋಡಿ: ಗಂಭೀರ ಸಮಸ್ಯೆಯಲ್ಲಿ ನಾಯಕ

ಮುಂದಿನ ಸುದ್ದಿ
Show comments