ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಮಾತುಕತೆ ನಡೆಸುವುದನ್ನು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮೊಸಳೆಯೊಂದಿಗಿನ ಮಾತುಕತೆಗೆ ಹೋಲಿಸಿದ್ದಾರೆ. ಈ ಮೂಲಕ ಜಾನ್ಸನ್ ಉಕ್ರೇನ್ ಕುರಿತು ಯಾವುದೇ ಶಾಂತಿಯುತ ಮಾತುಕತೆ ವಿಫಲವಾಗುವ ಸಾಧ್ಯತೆ ಇದೆ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಮೊಸಳೆಯ ಬಾಯಲ್ಲಿ ನಿಮ್ಮ ಕಾಲಿರುವಾಗ ಅದರೊಂದಿಗೆ ಮಾತನಾಡಿ ಬಿಡಿಸಿಕೊಳ್ಳಲು ಹೇಗೆ ಸಾಧ್ಯ? ಅದೇ ರೀತಿ ಉಕ್ರೇನಿಯನ್ನರು ದಾಳಿಯನ್ನು ಎದುರಿಸುತ್ತಿರುವಾಗ ರಷ್ಯಾದೊಂದಿಗೆ ಶಾಂತಿಯುತ ಮಾತುಕತೆ ನಡೆಸಲು ಸಾಧ್ಯವಿದೆಯೇ ಎಂದಿದ್ದಾರೆ. ಬೋರಿಸ್ ಜಾನ್ಸನ್ ಭಾರತದಲ್ಲಿ 2 ದಿನಗಳ ಪ್ರವಾಸ ಕೈಗೊಳ್ಳಲಿದ್ದು, ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ಮೋದಿಯನ್ನು ಉಕ್ರೇನ್‌ಗೆ ಬೆಂಬಲ ನೀಡುವಂತೆ ಮನವೊಲಿಸುವ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ