ಉರಿ-ನಂಜು’ ಜಟಾಪಟಿಗೆ ಶ್ರೀಗಳಿಂದ ಬ್ರೇಕ್​

Webdunia
ಸೋಮವಾರ, 20 ಮಾರ್ಚ್ 2023 (17:03 IST)
ರಾಜಕೀಯ ನಾಯಕರ ಉರಿಗೌಡ-ನಂಜೇಗೌಡ ಜಟಾಪಟಿಗೆ ಕೊನೆಗೂ ಬ್ರೇಕ್​ ಬಿದ್ದಿದೆ. ಉರಿಗೌಡ ನಂಜೇಗೌಡ ವಿಚಾರ ಅಪ್ರಸ್ತುತ ಎಂದು ನಿರ್ಮಲಾನಂದನಾಥ ಶ್ರೀಗಳು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ಸರಿಯಾದ ಸಂಶೋಧನೆ ಆಗದೆ ವಿಚಾರವನ್ನ ಎಲ್ಲಿ ಬೇಕೋ ಅಲ್ಲಿ ಚರ್ಚಿಸೋದು ಸೂಕ್ತವಲ್ಲ. ಇತಿಹಾಸವನ್ನ ಅರಿತವನು ಮತ್ತೊಂದು ಇತಿಹಾಸ ಸೃಷ್ಟಿಸಲು ಸಾಧ್ಯ. ಇತಿಹಾಸವನ್ನ ಅರಿತವರು ಎಂದರೆ ಆಯಾ ಕಾಲಘಟ್ಟದಲ್ಲಿ ಇದ್ದಂತಹ ವ್ಯಕ್ತಿಗಳು..ಶಿಲಾ ಶಾಸನಗಳು, ತಾಳೆಗರಿಗಳು, ಅಂದಿನ ಸಮಕಾಲಿನ ವ್ಯಕ್ತಿಗಳು ಬರೆದ ಇತಿಹಾಸಗಳು ಸಿಗದೆ ನಂತರ ಬರೆದ ಇತಿಹಾಸ ಸಾಕಷ್ಟು ಗೊಂದಲಕ್ಕೆ ಎಡೆಮಾಡಿಕೊಡುತ್ತೆ.. ಸಮುದಾಯಕ್ಕೆ, ರಾಜ್ಯಕ್ಕೆ ಮಾಡುವ ಕೆಲಸಗಳು ಸಾಕಷ್ಟಿದೆ.. ಈ ವಿಚಾರವನ್ನು ಇಟ್ಟುಕೊಂಡು ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡೋದು ಸರಿಯಲ್ಲ ಎಂದು ತಿಳಿಸಿದ್ರು. ಶಾಸಕ C.T. ರವಿ, ಶಾಸಕ ಗೋಪಾಲಯ್ಯ, ಸಚಿವ ಅಶ್ವತ್ಥ್​ ನಾರಾಯಣ್ ಇನ್ನಿತರರು ಈ ವಿಚಾರದ ಬಗ್ಗೆ ತಿಳಿದು ಮಾತನಾಡಬೇಕು.. ಈ ವಿಚಾರವಾಗಿ ಇನ್ಮುಂದೆ ಮಾತನಾಡದೆ ಸುಮ್ಮನಾಗಬೇಕು.. ಸುಮ್ಮನಿರ್ತಾರೆ ಅನ್ನೋದು ನಮ್ಮ ಭಾವನೆ ಎಂದು ನಿರ್ಮಲಾನಂದನಾಥ ಶ್ರೀಗಳು ತಿಳಿಸಿದ್ರು

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಾರ್ನಿಂಗ್ ಕೊಡಲು ಹೋಗಿ ಮಹತ್ವದ ಸುಳಿವು ಬಿಟ್ಟುಕೊಟ್ರಾ ಡಿಕೆ ಶಿವಕುಮಾರ್‌

ಕೊಳದಲ್ಲಿ ಮೀನು ಹಿಡಿಯುತ್ತಿರುವುದನ್ನು ನೋಡಿ ರಾಹುಲ್ ಗಾಂಧಿ ಏನ್ ಮಾಡಿದ್ರು ನೋಡಿ, Video

ಆರ್‌ಎಸ್‌ಎಸ್ ಬಗ್ಗೆ ಮಾತನಾಡದಿದ್ರೆ ಟಿಕೆಟ್ ಸಿಗಲ್ಲ: ಮತ್ತೇ ಪ್ರಿಯಾಂಕ್ ಖರ್ಗೆ ಕಿಡಿ

ವಿಷಗಾಳಿಯಿಂದ ರಾಷ್ಟ್ರ ರಾಜಧಾನಿ ಜನರನ್ನು ರಕ್ಷಿಸಿ: ಪ್ರಧಾನಿ ಮೋದಿಗೆ ಪ್ರಿಯಾಂಕಾ ಗಾಂಧಿ ಆಗ್ರಹ

ಬೆಂಗಳೂರು ರಕ್ಷಿಸಿ, ಟನಲ್ ರೋಡ್ ನಿಲ್ಲಿಸಿ ಘೋಷಣೆಯಡಿ ಸಹಿಸಂಗ್ರಹ ಆರಂಭಿಸಿದ ಬಿಜೆಪಿ

ಮುಂದಿನ ಸುದ್ದಿ
Show comments