ನಾಪತ್ತೆಯಾಗಿದ್ದ ನಾಯಿಯನ್ನು ಹುಡುಕಲು ಹೋಗಿ ಪ್ರಾಣ ಕಳೆದುಕೊಂಡ ಬಾಲಕ

Sampriya
ಶನಿವಾರ, 24 ಜನವರಿ 2026 (16:01 IST)
ಬೆಂಗಳೂರು: ಎರಡು ದಿನಗಳಿಂದ ನಾಪತ್ತೆಯಾಗಿದ್ದ ನಾಯಿಯನ್ನು ಹುಡುಕಲು ಹೋಗಿ ರೈಲು ಡಿಕ್ಕಿಯಾದ ಪರಿಣಾಮ ಬಾಲಕ ಸಾವನ್ನಪ್ಪಿದ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಮುದ್ದಲಿಂಗನಹಳ್ಳಿ ಗೇಟ್ ಬಳಿ ನಡೆದಿದೆ. 

ಮೃತ ಬಾಲಕನನ್ನು ಯೋಗೇಂದ್ರ ಎಂದು ಗುರುತಿಸಲಾಗಿದೆ. 

ಶ್ರೀನಿವಾಸ್ ಮತ್ತು ಚನ್ನಮ್ಮ ದಂಪತಿ ಮಗ ಯೋಗೆಂದ್ರ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಎರಡು ದಿನಗಳ ಹಿಂದೆ ಸಾಕು ನಾಯಿ ಕಾಣೆಯಾಗಿತ್ತು. ಕಾಣೆಯಾದ ನಾಯಿಯ ಹುಡುಕಾಟಕ್ಕೆ ತನ್ನ ಪೋಷಕರೊಂದಿಗೆ ಹೋಗಿದ್ದಾನೆ. ಈ ವೇಳೆ ರೈಲು ಡಿಕ್ಕಿಯಾಗಿ ಮೃತಪಟ್ಟಿದ್ದಾನೆ. 


ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದ ಯೋಗೇಂದ್ರ ಲಾಂಗ್‌ ಜಂಪ್‌ನಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾನೆ. ಇನ್ನೂ  ಘಟನಾ ಸ್ಥಳಕ್ಕೆ ಯಶವಂತಪುರ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಮೃತ ದೇಹ ಹಸ್ತಾಂತರ ಮಾಡಲಾಗಿದೆ. ಶವಗಾರದ ಬಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾನು ಕಾಂಗ್ರೆಸ್ ಪಕ್ಷದ ರೇಖೆಯನ್ನು ಉಲ್ಲಂಘಿಸಿಲ್ಲ: ಶಶಿ ತರೂರ್‌ ಸ್ಪಷ್ಟನೆ

ನಂದಿನಿ ಹಾಲು, ಮೊಸರು ಇದೀಗ ₹10ಕ್ಕೂ ಲಭ್ಯ, ಇಲ್ಲಿದೆ ಮಾಹಿತಿ

ರಾಜಸ್ಥಾನದಲ್ಲಿ ತೀವ್ರಗೊಂಡ ಶೀತಗಾಳಿ, ಮನೆಯಿಂದ ಹೊರಬರಲು ಜನತೆ ಹಿಂದೇಟು

ಛತ್ತೀಸ್‌ಗಢ ಖದೀಮರ ಕೈಚಳಕ್ಕೆ ನಗರವೇ ಶಾಕ್‌, ಆಗಿದ್ದೇನು ಎಲ್ಲಿ

ಬಿಜೆ‍ಪಿ ಅಧ್ಯಕ್ಷರಾದ ಬಳಿಕ ಪ.ಬಂಗಾಳಕ್ಕೆ ಮೊದಲ ಭೇಟಿ ನೀಡಲಿರುವ ನಿತಿನ್ ನಬಿನ್

ಮುಂದಿನ ಸುದ್ದಿ
Show comments