Webdunia - Bharat's app for daily news and videos

Install App

ಸಾಲಗಾರನ ಮಗಳನ್ನು ಕರೆದೊಯ್ದ ಪ್ರಕರಣ: ಆರೋಪಿ ಅರೆಸ್ಟ್‌

Sampriya
ಸೋಮವಾರ, 23 ಜೂನ್ 2025 (20:07 IST)
ಮಳವಳ್ಳಿ: ಸಾಲಗಾರನ 7 ವರ್ಷದ ಮಗಳನ್ನು ಕರೆದೊಯ್ದ ಪ್ರಕರಣ ಸಂಬಂಧ  ತಿ.ನರಸೀಪುರ ಬಜಾಜ್ ಪಿನ್ ಸರ್ವ್ ಮೈಕ್ರೋ ಫೈನಾನ್ಸ್ ಕಂಪನಿಯ ಸೆಂಟರ್ ಮ್ಯಾನೇಜರ್ ಪಿ.ಅಜಿತ್ (32) ಎಂಬುವವರನ್ನು ತಾಲ್ಲೂಕಿನ ಬೆಳಕವಾಡಿ ಪೊಲೀಸರು ಸೋಮವಾರ ಅರೆಸ್ಟ್ ಮಾಡಿದ್ದಾರೆ.

ತಿ.ನರಸೀಪುರ ತಾಲ್ಲೂಕಿನ ಜಾಲಹಳ್ಳಿಯ ನವೀನ ಎಂಬುವವರು, ತಾಯಿ ಮಂಗಳಮ್ಮ ಹೆಸರಿನಲ್ಲಿ ಆಟೊ ಖರೀದಿಗೆ ಸಂಸ್ಥೆಯಿಂದ ₹40 ಸಾವಿರ ಸಾಲ ಪಡೆದಿದ್ದರು. ಮೇ ತಿಂಗಲ ಕಂತು ಕಟ್ಟುವಲ್ಲಿ ತಡವಾಗಿತ್ತು. 

ಜೂನ್‌ 16ರಂದು ನವೀನ, ಪತ್ನಿ ಮತ್ತು ಮಗಳೊಂದಿಗೆ ತಾಲ್ಲೂಕಿನ ಪೂರಿಗಾಲಿಯ ಸಂಬಂಧಿಕರ ಮನೆಗೆ ಬಂದಿದ್ದರು.

ಅಲ್ಲಿಗೆ ತೆರಳಿದ್ದ ಆರೋಪಿಯು ನವೀನ ಅವರ ಮಗಳು ಹಾಗೂ ಪಕ್ಕದ ಮನೆಯ ಬಾಲಕನನ್ನು, ನವೀನ್‌ ಇದ್ದ ಸ್ಥಳ ತೋರಿಸುವಂತೆ ಬಲವಂತವಾಗಿ ಕರೆದುಕೊಂಡು ಹೋಗಿದ್ದಾನೆ. ನಂತರ ವಾಪಸ್ ಕರೆತಂದು ಬಿಟ್ಟಿದ್ದರು. ಈ ಸಂಬಂಧ ನವೀನ ಪೊಲೀಸರಿಗೆ ದೂರು ನೀಡಿದ್ದರು. 

ಇದೀಗ ಆರೋಪಿಯನ್ನು ತಮಿಳುನಾಡಿನ ಬಣ್ಣಾರಿ ಅಮ್ಮ ದೇವಸ್ಥಾನದ ಬಳಿ ಬಂಧಿಸಿ, ಕೃತ್ಯ ದಿನ ಬಳಸಿದ್ದ ಬೈಕ್‌ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೋದಿ ಸರ್ಕಾರದ ಸಾಲದ ಲೆಕ್ಕ ಹೇಳಿದ ಪ್ರಿಯಾಂಕ್ ಖರ್ಗೆ: ನಿಮ್ಮ ಕತೆನೂ ಹೇಳಿ ಸ್ವಾಮಿ ಎಂದ ನೆಟ್ಟಿಗರು

ಲೋಕಸಭೆ ಚುನಾವಣೆ ಬಳಿಕ ರಾಹುಲ್ ಗಾಂಧಿಯೇ ಪ್ರಧಾನಿ: ತೇಜಸ್ವಿ ಯಾದವ್ ವಿಶ್ವಾಸ

ಭೀಕರ ಮೇಘಸ್ಫೋಟಕ್ಕೆ ತತ್ತರಿಸಿದ ಹಿಮಾಚಲ ಪ್ರದೇಶ: ವರ್ಷದಲ್ಲಿ ಒಟ್ಟು 140 ಬಲಿ

ಸೇನಾ ಯೋಧನ ಮೇಲೆ ಹಿಗ್ಗಾಮುಗ್ಗಾ ಥಳಿತ, ಟೋಲ್ ಸಂಗ್ರಹ ಸಂಸ್ಥೆಗೆ ಬಿತ್ತು ಭಾರೀ ದಂಡ

ಅವಾಚ್ಯ ಶಬ್ದಗಳಿಂದ ನಿಂದನೆ: ಮಹೇಶ ಶೆಟ್ಟಿ ತಿಮರೋಡಿ ವಿರುದ್ಧ ಎಫ್‌ಐಆರ್‌

ಮುಂದಿನ ಸುದ್ದಿ
Show comments