Select Your Language

Notifications

webdunia
webdunia
webdunia
webdunia

ಪಕ್ಕದಲ್ಲೊಂದು ಬೋರ್ ವೆಲ್ ಕೊರೆದು ಕಾವೇರಿ ರಕ್ಷಣೆಗೆ ಕಾರ್ಯಾಚರಣೆ

ಪಕ್ಕದಲ್ಲೊಂದು ಬೋರ್ ವೆಲ್ ಕೊರೆದು ಕಾವೇರಿ ರಕ್ಷಣೆಗೆ ಕಾರ್ಯಾಚರಣೆ
ಬೆಳಗಾವಿ , ಭಾನುವಾರ, 23 ಏಪ್ರಿಲ್ 2017 (21:06 IST)
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝಂಜರವಾಡದಲ್ಲಿ ಕೊಳವೆ ಬಾವಿಗೆ ಬಿದ್ದಿರುವ 6 ವರ್ಷದ ಬಾಲಕಿ ಕಾವೇರಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.  ಕಳೆದ 28 ಗಂಟೆಗಳಿಂದ ಸತತ ಕಾರ್ಯಾಚರಣೆ ನಡೆದಿದೆ.

ಬಂಡೆಗಲ್ಲು ಅಡ್ಡ ಬಂದಿರುವುದರಿಂದ ಬೋರ್ ವೆಲ್ ಪಕ್ಕದಲ್ಲಿ ಮತ್ತೊಂದು ಬೋರ್ ವೆಲ್ ಕೊರೆದು ಸುರಂಗ ನಿರ್ಮಿಸಿ ಬಾಲಕಿಯ ರಕ್ಷಣೆಗೆ ಕಾರ್ಯತಂತ್ರ ರೂಪಿಸಲಾಗಿದೆ. ಈಗ ಪಕ್ಕದಲ್ಲಿ ಬೋರ್ ವೆಲ್ ಕೊರೆಯುವ ಕಾರ್ಯ ಪ್ರಗತಿಯಲ್ಲಿದೆ. ಬಾಲಕಿ ಕೆಳಗೆ ಬೀಳದಂತೆ ಅಡ್ಡೆಗೋಡೆ ನಿರ್ಮಿಸಿ ಬಳಿಕ ಮಗುವನ್ನ ಮೇಲೆತ್ತುವ ಕಾರ್ಯ ನಡೆಯಲಿದೆ.

ಬೆಳಗ್ಗೆ ಮಗುವಿನ ಬಟ್ಟೆ ಮತ್ತು ಕೈ ಕಂಡುಬಂದರೂ ಹುಕ್ ಮೂಲಕ ಮೇಲೆತ್ತಲು ಐದಾರು ಬಾರಿ ನಡೆಸಿದ ಪ್ರಯತ್ನ ಫಲ ನೀಡಲಿಲ್ಲ. ಅಗ್ನಿಶಾಮಕ ದಳ, ಎನ್`ಡಿಆರ್`ಎಫ್ ಸೇರಿದಂತೆ 500ಕ್ಕೂ ಅಧಿಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದೆ. ಡಿಸಿ, ಎಸ್ಪಿ ಸೇರಿದಂತೆ  ಸ್ಥಳದಲ್ಲೇ ಬೀಡುಬಿಟ್ಟಿದ್ದು, ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಬಾಲಕಿಯ ತಾಯಿ ಸವಿತಾ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಿ ಅಧಿಕಾರಿಗಳ ಹಾಜರಾತಿಗೆ ಬಯೋ ಮೆಟ್ರಿಕ್ ಜಾರಿಗೆ ತಂದ ಯೋಗಿ ಆದಿತ್ಯಾನಾಥ್