Publish Date: Sat, 16 Jul 2022 (07:35 IST)
Updated Date: Sat, 16 Jul 2022 (07:17 IST)
ಬೆಂಗಳೂರು : ಕೋವಿಡ್ ಸೋಂಕಿನಿಂದ ಬಳಲುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಶೀಘ್ರವೇ ಗುಣಮುಖರಾಗುವಂತೆ ಹಾರೈಸಿ, ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಕೋವಿಡ್ ಸೋಕಿಗೆ ತುತ್ತಾಗಿರುವ ತಮಿಳುನಾಡಿನ ಸಿಎಂ ಎಂ.ಕೆ ಸ್ಟಾಲಿನ್ ಅವರು ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಶೀಘ್ರವೇ ಚೇತರಿಸಿಕೊಂಡು, ಮತ್ತೆ ತಮ್ಮ ಕಚೇರಿಗೆ ಮರಳಿ ಎಂದಿನಂತೆ ಕೆಲಸ ಮಾಡುವಂತಾಗಲಿ.
ಗುಣಮುಖರಾಗಿ ರಾಜ್ಯದ ಜನತೆಯ ಸೇವೆಯನ್ನು ಪುನರಾರಂಭಿಸಲಿ ಎಂದು ಬೊಮ್ಮಾಯಿ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.