ಬೆಂಗಳೂರು:ರಾಜ್ಯದಲ್ಲಿ ಇನ್ನೂ ತಣ್ಣಗಾಗ್ತಿಲ್ಲ ಖಾತೆ ಕ್ಯಾತೆ.ಮತ್ತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರಿಷ್ಠರ ಭೇಟಿಯಾಗುತ್ತಿದ್ದಾರೆ. ವರಿಷ್ಠರ ಭೇಟಿಗೆ ಸಮಯವನ್ನು ಕೇಳಿದ್ದು,ಮುಖ್ಯಮಂತ್ರಿ ಬೊಮ್ಮಾಯಿ ಆನಂದ್ ಸಿಂಗ್ ವಿರುದ್ದ ದೂರನ್ನು ನೀಡಲಿದ್ದಾರೆ.
ಈ ಭೇಟಿ ಸಂಧರ್ಭದಲ್ಲಿ ಲಸಿಕೆಗಳ ಬಗ್ಗೆ, ರಾಜ್ಯ ಯೋಜನೆಗಳ ಬಗ್ಗೆ ಚರ್ಚೆ ಆಗುತ್ತದೆ.ಪ್ರಧಾನಿ ಮೋದಿ,ಗೃಹ ಸಚಿವ ಅಮಿತ್ ಶಾ,ಕೇಂದ್ರ ಜಲಸಂಪನ್ಮೂಲ ಸಚಿವರು, ಕೇಂದ್ರ ಆರೋಗ್ಯ ಸಚಿವರು, ಪಕ್ಷದ ಅಧ್ಯಕ್ಷರಿಗೆ ಭೇಟಿ ನೀಡಲು ಸಮಯ ಕೇಳಿದ್ದಾರೆ.
ಆನಂದ್ ಸಿಂಗ್ ರವರು ಎಷ್ಟೇ ಸಂಧಾನ ಮಾಡಿದರೂ ಕೂಡ ಖಾತೆ ಬದಲಾವಣೆ ಬಗ್ಗೆ ಪಟ್ಟು ಹಿಡಿದುಕೊಂಡಿದ್ದಾರೆ. ಕೊಟ್ಟಿರುವ ಖಾತೆಯ ಇಲಾಖೆಯ ಜವಾಬ್ದಾರಿಯನ್ನು ಇನ್ನೂ ವಹಿಸಿಕೊಂಡಿಲ್ಲ.ಅಲ್ಲಿ ಕೆಲಸಗಳೂ ನಡೆಯುತ್ತಿಲ್ಲ ಅನ್ನೋ ಕಾರಣಕ್ಕೆ ಈಗಾಗಲೇ ಮುಖ್ಯಮಂತ್ರಿಗಳು ಅಸಮಾಧಾನಗೊಂಡಿದ್ದಾರೆ.ಈ ಎಲ್ಲಾ ವಿಚಾರಗಳನ್ನು ವರಿಷ್ಠರ ಗಮನಕ್ಕೆ ತರುವ ಸಾಧ್ಯತೆಗಳಿವೆ. ವರಿಷ್ಠರು ಏನು ಸಂದೇಶ ಕೊಡುತ್ತಾರೋ ಅದರ ಮೇಲೆ ಅನಂದ್ ಸಿಂಗ್ ರವರ ಭವಿಷ್ಯ ಕೂಡ ನಿರ್ಧಾರ ಆಗುತ್ತದೆ.