ಬೆಂಗಳೂರು: ಕೊನೆಗೂ ಮತ್ತೆ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ ಶುರುವಾಗಲಿದೆ. ಸೋಮವಾರದಿಂದ ಬಿಎಂಟಿಸಿ ಬಸ್ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಲಿದೆ ಎಂಬ ಸುದ್ದಿ ಬಂದಿದೆ.
ಆದರೆ ಕೆಲವೊಂದು ಷರತ್ತುಗಳು ಅನ್ವಯವಾಗಲಿದೆ. ಎಂದಿನಷ್ಟು ಬಸ್ ಗಳು ರಸ್ತೆಗಿಳಿಯಲ್ಲ. ರಸ್ತೆಗಿಳಿದರೂ ಬಸ್ ಗಳಲ್ಲಿ ಶೇ. 50 ಪ್ರಯಾಣಿಕರಿಗೆ ಮಾತ್ರ ಸಂಚರಿಸಲು ಅವಕಾಶ ಸಿಗಲಿದೆ.
ಇನ್ನು ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ. ಒಂದು ಆಸನದಲ್ಲಿ ಒಬ್ಬರಿಗೆ ಕೂರಲು ಅವಕಾಶ ಸಿಗಲಿದೆ.ಪ್ರಮುಖ ಬಸ್ ನಿಲ್ದಾಣಗಳಲ್ಲಿ ಕೊವಿಡ್ ಟೆಸ್ಟ್ ಕಡ್ಡಾಯ. ಇನ್ನು, ನಿಂತುಕೊಂಡು ಪ್ರಯಾಣಿಸಲು ಅವಕಾಶವಿರಲ್ಲ. ಸಂಜೆ 7 ಗಂಟೆಯ ಬಳಿಕ ಬಸ್ ಸಂಚಾರಕ್ಕೆ ಅವಕಾಶವಿರದು.