ಬೆಂಗಳೂರು : ಇನ್ನುಮುಂದೆ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್ ಫಾಮ್ರ್ ಪ್ರವೇಶಿಸಲು ಗರ್ಭಿಣಿಯರಿಗೆ ಪ್ರತ್ಯೇಕ ಪ್ರವೇಶ ಕಲ್ಪಿಸಲಾಗಿದೆ.
ಹಲವು ಗರ್ಭಿಣಿಯರು ತಾವು ಪ್ರಯಾಣ ಮಾಡುವ ಸಲುವಾಗಿ ಮೆಟ್ರೋ ನಿಲ್ದಾಣದಲ್ಲಿಕ್ಕೆ ಬಂದತಹ ವೇಳೆಯಲ್ಲಿ ನಾವು ಟೋಕನ್ ಸಂಗ್ರಹ (ಎಎಫ್ಸಿ) ಗೇಟ್ ಮುಖಾಂತರ ಹೋಗುವುದಕ್ಕೆ ಹೆದರಿಕೆ ಉಂಟಾಗುತ್ತದೆ ಎಂದು ಮೆಟ್ರೋ ಅಧಿಕಾರಿಗಳಲ್ಲಿ ತಮ್ಮ ಆತಂಕ ವ್ಯಕ್ತಪಡಿಸಿ ಮನವಿ ಸಲ್ಲಿಸಿದ್ದರು.
ಈ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಗರ್ಭಿಣಿಯರು ಸ್ವಯಂಚಾಲಿತ ಟೋಕನ್ ಸಂಗ್ರಹ (ಎಎಫ್ಸಿ) ಬದಲಿಗೆ ಅದರ ಪಕ್ಕದಲ್ಲಿರುವ ಸಿಬ್ಬಂದಿ ಗೇಟ್ ಮೂಲಕ ಪ್ಲಾಟ್ ಫಾರಂ ಅನ್ನು ಪ್ರವೇಶ ಮಾಡುವುದಕ್ಕೆ ಬಿ.ಎಂ.ಆರ್.ಸಿ.ಎಲ್ ಅವಕಾಶ ನೀಡಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.