Daily Horoscope
✕

ನಮ್ಮ ಮೆಟ್ರೋ ಕಾಮಗಾರಿ ಮುಗಿಸಿದ ವಿಂಧ್ಯಾ..!!!!

Webdunia
ಗುರುವಾರ, 14 ಅಕ್ಟೋಬರ್ 2021 (15:07 IST)
ನಮ್ಮ ಮೆಟ್ರೋ ಕಾಮಗಾರಿ 
ಮುಗಿಸಿದ ವಿಂಧ್ಯಾ..!!!!
 
ನಮ್ಮ ಮೆಟ್ರೊ' ಎರಡನೇ ಹಂತದ ಕಾಮಗಾರಿಯಡಿ ಕಂಟೋನ್ಮೆಂಟ್‌ನಿಂದ ಶಿವಾಜಿನಗರ ಮೆಟ್ರೊ ನಿಲ್ದಾಣದವರೆಗೆ ಸುರಂಗ ಮಾರ್ಗ ಕೊರೆಯುವ ಕಾರ್ಯವನ್ನು 'ವಿಂಧ್ಯಾ' ಹೆಸರಿನ ಟಿಬಿಎಂ (ಸುರಂಗ ಕೊರೆಯುವ ಯಂತ್ರ) ಯಶಸ್ವಿಯಾಗಿ ಪೂರ್ಣಗೊಳಿಸಿ ಬುಧವಾರ ಹೊರಬಂದಿದೆ.
ಇದೇ ಮಾರ್ಗಕ್ಕೆ ಮತ್ತೊಂದು ಸುರಂಗ ಕೊರೆದಿದ್ದ ಮೊದಲ ಯಂತ್ರ 'ಊರ್ಜಾ' ಸೆ.22ರಂದು ಯಶಸ್ವಿಯಾಗಿ ಹೊರಬಂದಿತ್ತು.
ಈಗ ಸಮಾನಾಂತರ ಸುರಂಗ ಮಾರ್ಗ ಕೊರೆಯಲು ತೆರಳಿದ್ದ ವಿಂಧ್ಯಾ, ಶಿವಾಜಿನಗರ ಮೆಟ್ರೊ ನಿಲ್ದಾಣದ ದಕ್ಷಿಣ ತುದಿಯಲ್ಲಿ ಹೊರಬಂದಿದೆ. ಒಟ್ಟು 855 ಮೀಟರ್‌ ಉದ್ದದ ಸುರಂಗ ಕೊರೆಯುವ ಕೆಲಸವನ್ನು ವಿಂಧ್ಯಾ ಪೂರ್ಣಗೊಳಿಸಿದೆ.
'ಕಂಟೋನ್ಮೆಂಟ್‌ ನಿಲ್ದಾಣದಲ್ಲಿ ಈ ಯಂತ್ರವನ್ನು ಮರುಜೋಡಣೆ ಮಾಡಿ, ಈ ನಿಲ್ದಾಣದಿಂದ ಪಾಟರಿ ಟೌನ್‌ ನಿಲ್ದಾಣದವರೆಗೆ ಸುರಂಗ ಮಾರ್ಗ ಕೊರೆಯಲು ನಿಯೋಜಿಸಲಾಗುವುದು' ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಪ್ರಕಟಣೆ ತಿಳಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಬ್ಬಾ ಏನು ದೌಲತ್ತು… ಬಂಗಲೆ ತೊಳೆಯಲು ಅಗ್ನಿಶಾಮಕ ವಾಹನ ಬಳಸಿದ ಗುಜರಾತ್ ಬಿಜೆಪಿ ಶಾಸಕ Video

ನಕಲಿ ಸುಪ್ರೀಂ ಕೋರ್ಟ್ ಆದೇಶ ಬಳಸಿ ಜೀವಾವಧಿ ಕೈದಿ ಬಿಡುಗಡೆ: ಕರ್ನಾಟಕ ಕಾರಾಗೃಹ ಡಿಐಜಿ ಸೋಮಶೇಖರ್ ಬಂಧನ

ಸುಳ್ಳು ಆರೋಪ ಮಾಡಿದ ಸಿ.ಎಂ ವಿರುದ್ಧ ಮೊಕದ್ದಮೆ ದಾಖಲಿಸಿ: ಸಿ.ಟಿ.ರವಿ ಆಗ್ರಹ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ ವೇಳೆ ಬ್ಯಾರಿಕೇಡ್ ಏರಿ ರಾಹುಲ್ ಗಾಂಧಿ ಸಾಹಸ: Video

ಮುಂದಿನ ಸುದ್ದಿ
Show comments