ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಡಿಜಿಟಲ್ ಪಾಸ್ಗಳನ್ನು ನೀಡಲು ಅನುಕೂಲವಾಗಿದ್ದ ಸ್ಟಾರ್ಟ್ಅಪ್ ಕಂಪನಿಯೊಂದಿಗಿನ ಒಪ್ಪಂದ ಸ್ಥಗಿತಗೊಳಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMRC) ನಿರ್ಧರಿಸಿದೆ. ಇದರಿಂದ ಪಾಸ್ ಖರೀದಿಗೆ ಹೊಡೆ ಬೀಳುವ ಸಾಧ್ಯತೆ ಇದ್ದು, ಪ್ರಯಾಣಿಕರಿಗೂ ತೊಂದರೆ ಆಗಲಿದೆ.
ಬಿಎಂಟಿಸಿಯ ಈ ಒಪ್ಪಂದದ ರದ್ದು ನಿರ್ಧಾರವು ಸಾರ್ವಜನಿಕ ಸಾರಿಗೆ ನಂಬಿಕೊಂಡ ಬೆಂಗಳೂರಿನ ಲಕ್ಷಾಂತರ ಬಳಕೆದಾರರ ಮೇಲೆ ಪರಿಣಾಮ ಬೀರಲಿದೆ. ಹಿಂದಿನ ತಿಂಗಳು ನಿಗಮ ಟುಮೊಕ್ ಸಂಸ್ಥೆ ಜೊತೆ ಸೇರಿ ಒಟ್ಟು ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಪಾಸ್ ಮಾರಾಟ ಮಾಡಿದೆ. ಕಳೆದ ವರ್ಷ ಏಪ್ರಿಲ್ ನಲ್ಲಿ ವಿತರಿಸಲಾದ ಡಿಜಿಟಲ್ ಪಾಸ್ಗಳ ಸಂಖ್ಯೆ 4,500 ರಿಂದ ಜನವರಿ 2023 ರಲ್ಲಿ 1.5 ಲಕ್ಷಕ್ಕೆ ಹೆಚ್ಚಾಗಿದೆ.ಇನ್ನು ಡಿಜಿಟಲ್ ಪಾಸ್ಗಳು ಪ್ರಯಾಣಿಕರಿಗೆ ಹೆಚ್ಚು ಅನುಕೂಲಕರವಾಗಿದ್ದು, ಈ ಒಪ್ಪಂದದಿಂದ ಮತ್ತೆ ಹಳೆಯ ಟಿಕೆಟ್ ವ್ಯವಸ್ಥೆಗೆ ಮರಳುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ ಖಾಸಗಿ ಸಂಸ್ಥೆಗಳ ಜೊತೆ ಒಪ್ಪಂದ ಅಷ್ಟು ಸುರಕ್ಷಿತವಲ್ಲ, ನಾವೇ ಸ್ವತಃ ಡಿಜಿಟಲ್ ಟಿಕೆಟಿಂಗ್ ವ್ಯವಸ್ಥೆ ಜೊತೆ ಸೇವೆ ನೀಡಲು ಸಜ್ಜಾಗುತ್ತಿದ್ದೇವೆ ಎಂದಿದ್ದಾರೆ.