Select Your Language

Notifications

webdunia
webdunia
webdunia
webdunia

ಬಿಎಂಸಿ ಚುನಾವಣೆ: ಶಿವಸೇನೆ, ಬಿಜೆಪಿಯ ಪೈಪೋಟಿಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣ

ಬಿಎಂಸಿ ಚುನಾವಣೆ: ಶಿವಸೇನೆ, ಬಿಜೆಪಿಯ ಪೈಪೋಟಿಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣ
ಮುಂಬೈ , ಗುರುವಾರ, 23 ಫೆಬ್ರವರಿ 2017 (18:40 IST)
ಏಷ್ಯಾದ ಅತಿದೊಡ್ಡ ಮಹಾನಗರಪಾಲಿಕೆ ಎನ್ನುವ ಖ್ಯಾತಿಗೊಳಗಾದ ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಯ ಚುನಾವಣಾ ಫಲಿತಾಂಶ ಇಂದು ಬಹಿರಂಗವಾಗಿದ್ದು ಶಿವಸೇನೆ 84 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದರೆ ಬಿಜೆಪಿ 81 ಸ್ಥಾನಗಳಿಸಿದೆ
ಬೃಹನ್ ಮುಂಬೈ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು 114 ಸ್ಥಾನಗಳು ಅಗತ್ಯವಾಗಿದ್ದು, ಇದೀಗ ಅತಂತ್ರ ವಾತಾವರಣ ನಿರ್ಮಾಣವಾಗಿದೆ. ಚುನಾವಣೆಯಲ್ಲಿ ಶಿವಸೇನೆ ಅತಿ ಹೆಚ್ಚು ಸ್ಥಾನಗಳಿಸಿದ್ದರೂ ಅಧಿಕಾರ ಹಿಡಿಯಲು ಮಾತ್ರ ಸಾಧ್ಯವಾಗುತ್ತಿಲ್ಲ.
 
ಕಳೆದ 20 ವರ್ಷಗಳಿಂದ ಮೈತ್ರಿಕೂಟ ಪಕ್ಷಗಳಾಗಿದ್ದ ಶಿವಸೇನೆ ಮತ್ತು ಬಿಜೆಪಿ, ಇದೀಗ ಮೈತ್ರಿಯನ್ನು ಅಂತ್ಯಗೊಳಿಸಿದೆ.ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಮತ್ತೆ ಶಿವಸೇನೆ, ಬಿಜೆಪಿ ಒಂದಾಗುತ್ತವೆಯೋ ಎನ್ನುವುದನ್ನು ಕಾದುನೋಡಬೇಕಾಗಿದೆ. 
 
ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೇವಲ 31 ಸ್ಥಾನ ಗಳಿಸಿದ್ದರೆ, ರಾಜ್ ಠಾಕ್ರೆ ನೇತೃತ್ವದ ಎಂಎನ್‌ಎಸ್‌ಗೆ 7 ಸ್ಥಾನ, ಪವಾರ್ ನೇತೃತ್ವದ ಎನ್‌ಸಿಪಿಗೆ 9 ಸ್ಥಾನ ಹಾಗೂ 14 ಸ್ಥಾನಗಳಲ್ಲಿ ಇತರರು ಜಯಗಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಸ್ ಶಾಸಕ ಪಿಳ್ಳಮುನಿಶಾಮಪ್ಪ ರಾಜೀನಾಮೆ ನೀಡಿರುವುದು ನಿಜ: ಸ್ಪೀಕರ್ ಕೋಳಿವಾಡ್