ಹಾಸ್ಯನಟನಿಗೆ ಯುವತಿ ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ; ಇಬ್ಬರು ಬೆಂಗಳೂರು ಹುಡುಗರು ಅರೆಸ್ಟ್

Webdunia
ಶುಕ್ರವಾರ, 5 ಅಕ್ಟೋಬರ್ 2018 (06:54 IST)
ಮಂಗಳೂರು : ತುಳು ಚಲನಚಿತ್ರ ರಂಗದ ಹಾಸ್ಯನಟರೊಬ್ಬರಿಗೆ ಬೆಂಗಳೂರಿನ ಇಬ್ಬರು ಹುಡುಗರು ಯುವತಿ ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಗಳು ಬೆಂಗಳೂರಿನ ಯಶವಂತಪುರ ನಿವಾಸಿ ಆದಿತ್ಯ ಮತ್ತು ರಾಮನಗರ ಜಿಲ್ಲೆಯ ಕನಕಪುರ ನಿವಾಸಿ ಅರುಣ್ ಎಚ್.ಎಸ್‍ ಎಂಬುದಾಗಿ ತಿಳಿದುಬಂದಿದೆ. ಇವರಲ್ಲಿ ಆದಿತ್ಯ ಎಂಬಾತ  ಮಂಗಳೂರಿನ 25 ವರ್ಷದ ಹಾಸ್ಯನಟನಿಗೆ ಫೇಸ್ ಬುಕ್ ನಲ್ಲಿ ಆರಾಧ್ಯ ಎಂಬ ಯುವತಿಯ ಹೆಸರು ಇಟ್ಟುಕೊಂಡು ವಂಚಿಸಿದ್ದಾನೆ.

 

ಸಲುಗೆಯ ಮಾತನಾಡಿದ ಯುವತಿ ಆದಿತ್ಯ  ಅಲಿಯಾಸ್ ಆರಾಧ್ಯಗೆ ಚಿತ್ರನಟ, ತನ್ನ ಅರೆನಗ್ನ ಫೋಟೋವನ್ನು ಕಳುಹಿಸಿದ್ದಾನೆ. ಈ ಫೋಟೋ ಪಡೆದ ಯುವಕ ಆರಾಧ್ಯ, ಚಿತ್ರನಟನನ್ನು ಬ್ಲಾಕ್ ಮೇಲ್ ಮಾಡಿದ್ದು ಬಳಿಕ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿ ಬೆಂಗಳೂರಿಗೆ ಕರೆಸಿಕೊಂಡು 65 ಸಾವಿರ ರೂ. ವಸೂಲಿ ಮಾಡಿದ್ದಾನೆ.

 

ಆ ನಂತರ ಇನ್ನಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಾಗ ನಟ ಮಂಗಳೂರಿನ ಪೊಲೀಸ್ ಠಾಣಿಯಲ್ಲಿ ದೂರು ದಾಖಲಿಸಿದ್ದಾರೆ. ತನಿಖಾ ಹಂತದಲ್ಲಿ ಕಮಿಷನರ್ ಹೆಸರಲ್ಲಿ ಮತ್ತು ಗೃಹಮಂತ್ರಿ ಪಿಎ ಹೆಸರಿನಲ್ಲೂ ಫೋನ್ ಕರೆ ಮಾಡಿ ಆರೋಪಿಗಳು ವ್ಯಕ್ತಿಯನ್ನು ಬೆದರಿಸಿದ್ದಾರೆ.

 

ಕಾರ್ಯಾಚರಣೆ ನಡೆಸಿದ ಮಂಗಳೂರಿನ ಪೊಲೀಸರು ಈ ಇಬ್ಬರು ಆರೋಪಿಗಳನ್ನು ಬೆಂಗಳೂರಿನಲ್ಲಿ  ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಆದಿತ್ಯ 19ರ ಹರೆಯದ ಪಿಯುಸಿ ವಿದ್ಯಾರ್ಥಿ ಆಗಿದ್ದು ಹುಡುಗಿಯ ವೇಷದಲ್ಲಿ  ಹಲವರನ್ನು ಬ್ಲಾಕ್ ಮೇಲ್ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಜೆಪಿ ನಾಯಕರ ಮಾತಿಗೆ ರೈತರು ಮರಳಾಗಬೇಡಿ: ಸಿಎಂ ಸಿದ್ದರಾಮಯ್ಯ

ಅದೆಲ್ಲಾ ಯಾವ ಪುರುಷಾರ್ಥಕ್ಕೆ ಎಂದಿದ್ಯಾಕೆ ಎಚ್ ಡಿ ಕುಮಾರಸ್ವಾಮಿ

Meerut Saurabh Rajput Case: ಊರೇ ಬಿಡಲು ಮುಂದಾದ ಆರೋಪಿ ಮುಸ್ಕಾನ್ ಕುಟುಂಬ

ಗಾಲಿಕುರ್ಚಿಯಲ್ಲಿ ಕೂತಿದ್ದ ಪ್ರತೀಕಾ ರಾವಲ್‌ ನೋಡಿ ಮೋದಿ ಏನ್ಮಾಡಿದ್ರೂ ನೋಡಿ

ಬೆಂಗಳೂರು ಎರ್ನಾಕುಲಂ ಸೇರಿದಂತೆ ನಾಲ್ಕು ವಂದೇ ಭಾರತ್ ರೈಲುಗಳಿಗೆ ನರೇಂದ್ರ ಮೋದಿ ಚಾಲನೆ, ಇಲ್ಲಿದೆ ಮಾಹಿತಿ

ಮುಂದಿನ ಸುದ್ದಿ
Show comments