Daily Horoscope

ಪ್ರಜ್ವಲ್ ಪ್ರಕರಣದ ಹಿಂದಿರುವುದು ಬ್ಲಾಕ್‌ ಮೇಲ್‌ ಕಿಂಗ್‌ ಕುಮಾರಸ್ವಾಮಿ: ಡಿಕೆ ಶಿವಕುಮಾರ್

Sampriya
ಬುಧವಾರ, 8 ಮೇ 2024 (18:19 IST)
ಬೆಂಗಳೂರು:  ಕುಮಾರಸ್ವಾಮಿ ಅವರು ಹಿಟ್‌ ಅಂಡ್‌ ರನ್‌ ಗಿರಾಕಿ ಅನ್ನೋದು ರಾಜ್ಯದ ಜನತೆಗೆ ಚೆನ್ನಾಗಿ ಗೊತ್ತಿದೆ. ಅವರು ಈ ಹಿಂದಿನಿಂದಲೂ ಮಾಡಿದ ಆರೋಪಗಳು ಯಾವುದೂ ಸಾಬೀತಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.

ಎಚ್‌ ಡಿ ಕುಮಾರಸ್ವಾಮಿ ಅವರು ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣದ ಸೂತ್ರಧಾರಿ ಡಿಕೆಶಿ ಎಂದು ಆರೋಪಿಸಿದ್ದರು. ಅದಲ್ಲದೆ ಡಿಕೆಶಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಸಂಬಂಧ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು,  ಕುಮಾರಸ್ವಾಮಿ ಅವರು ಹಿಟ್‌ ಅಂಡ್‌ ರನ್‌ ಗಿರಾಕಿ ಅನ್ನೋದು ರಾಜ್ಯದ ಜನತೆಗೆ ಚೆನ್ನಾಗಿ ಗೊತ್ತಿದೆ. ಅವರು ಈ ಹಿಂದಿನಿಂದಲೂ ಮಾಡಿದ ಆರೋಪಗಳು ಯಾವುದೂ ಸಾಬೀತಾಗಿಲ್ಲ, ಪ್ರಜ್ವಲ್‌ ರೇವಣ್ಣ ಸೆಕ್ಸ್‌ ಗೇಟ್‌ ಪ್ರಕರಣದಲ್ಲಿ ನನ್ನ ಹೆಸರು ಮುನ್ನಲೆಗೆ ತಂದರೆ ಇಡೀ ರಾಜ್ಯದ ಗಮನ ಸೆಳೆಯಬಹುದು ಎನ್ನುವ ಕಾರಣಕ್ಕೆ ಅವರು ಪದೇ ಪದೇ ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ.

ಈ ಕೇಸಿನ ಹಿಂದೆ ಇರುವುದು ಬ್ಲಾಕ್‌ ಮೇಲ್‌ ಕಿಂಗ್‌ ಕುಮಾರಸ್ವಾಮಿ. ರಾಜಕಾರಣಿಗಳು, ಅಧಿಕಾರಿಗಳನ್ನು ಬ್ಲಾಕ್‌ ಮೇಲ್‌ ಮಾಡುವುದೇ ಅವರ ಕೆಲಸ. ಅವರಿಗೆ ದಿನಕ್ಕೊಮ್ಮೆ ನನ್ನ ಹೆಸರು ಎತ್ತದಿದ್ದರೆ ನಿದ್ದೆ ಬರಲ್ಲ. ಈಗಲೂ ನಾನು ಹೇಳುತ್ತಿದ್ದೇನೆ ಈ ಪ್ರಕರಣದ ಕಥಾನಾಯಕ, ಡೈರೆಕ್ಟರ್, ಪ್ರೋಡ್ಯೂಸರ್ ಎಲ್ಲಾ ಕುಮಾರಸ್ವಾಮಿ ಅವರೇ.

ನಮ್ಮದು ರೇವಣ್ಣ ಅವರದು ಬೇರೆ ಕುಟುಂಬ ಅಂತ ಹಿಂದೆ ಅವರೇ ಹೇಳಿದ್ದರು. ಉಪ್ಪು ತಿಂದವನು ನೀರು ಕುಡಿಯಬೇಕು ಅಂತ ಕೂಡ ಹೇಳಿದ್ರು, ಈಗ ಯಾಕೆ ಮತ್ತೆ ಹಿಟ್‌ ಅಂಡ್‌ ರನ್‌ ಮಾಡ್ತಿದ್ದಾರೆ? ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ, ಈಗಲೇ ತೀರ್ಪು ಕೊಡೋಕೆ ಕುಮಾರಸ್ವಾಮಿ ಅವರೇನು ಲಾಯರೋ? ಜಡ್ಜೋ? ಚರ್ಚೆ ಮಾಡಲು ಇನ್ನೂ ಟೈಮ್ ಇದೆ, ವಿಧಾನಸಭೆ ಅಧಿವೇಶನ ಇದೆ, ಎಲ್ಲಾ ತೆಗೆದುಕೊಂಡು ಬರಲಿ ಚರ್ಚೆ ಮಾಡೋಣ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಕರುಣೆ ಎನ್ನೋದು ಸತ್ತು ಹೋಯ್ತಾ.. ಪಂಕೋಟ್ ಸೇತುವೆಯಿಂದ ಹರಿಯುವ ಸೇತಿ ನದಿಗೆ ಶ್ವಾನವನ್ನು ಎಸೆದ ಮಹಿಳೆ: Video

ಮುಂದಿನ ಸುದ್ದಿ
Show comments