ಬೆಂಗಳೂರು: ಸತ್ರೂ ನನ್ನ ಬಾಡಿ ಆರ್ ಎಸ್ಎಸ್ ಗೆ ಹೋಗಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ನೆಟ್ಟಿಗರೊಬ್ಬರು ವ್ಯಂಗ್ಯ ಮಾಡಿದ್ದು ಇಲ್ಲಿ ಕಸ ಹಾಕಬಾರದು ಎಂದು ಆರ್ ಎಸ್ಎಸ್ ನಲ್ಲಿ ಬೋರ್ಡ್ ಇದೆ ಎಂದಿದ್ದಾರೆ.
ವಿಧಾನಪರಿಷತ್ ನಲ್ಲಿ ಆರ್ ಎಸ್ಎಸ್ ಬಗ್ಗೆ ಬಿಜೆಪಿ ಸದಸ್ಯ ಶಾಂತಾರಾಮ್ ಸಿದ್ದಿ ಮಾತನಾಡುವಾಗ ಬಿಕೆ ಹರಿಪ್ರಸಾದ್ ಕಾಲೆಳೆದರು. ಬಿಕೆ ಹರಿಪ್ರಸಾದ್ ಸದಾ ಆರ್ ಎಸ್ಎಸ್ ಸಂಘಟನೆ ವಿರುದ್ಧ ಕಿಡಿ ಕಾರುತ್ತಿರುತ್ತಾರೆ. ಶಾಂತಾರಾಮ್ ಸಿದ್ದಿ ಈ ವಿಚಾರವಾಗಿ ತಮ್ಮ ಹೆಸರು ಎಳೆದು ತಂದಾಗ ಬಿಕೆ ಹರಿಪ್ರಸಾದ್ ಗರಂ ಆದರು.
ಇದಕ್ಕೆ ಕೆರಳಿ ಬಿಕೆ ಹರಿಪ್ರಸಾದ್, ನನ್ನ ಡೆಡ್ ಬಾಡಿ ಕೂಡಾ ಆರ್ ಎಸ್ಎಸ್ ಗೆ ಹೋಗದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ವಿಪಕ್ಷ ನಾಯಕ ಛಲವಾದಿ ನಾರಾಯಸ್ವಾಮಿ ಡೆಡ್ ಬಾಡಿಯನ್ನು ಬಿಜೆಪಿ ಕಚೇರಿ ತನಕ ಬಿಟ್ಟುಕೊಳ್ಳಲ್ಲ ಎಂದಿದ್ದಾರೆ.
ಆದರೆ ಬಿಕೆ ಹರಿಪ್ರಸಾದ್ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಕಾಮೆಂಟ್ ಗಳಿಗೆ ಕಾರಣವಾಗಿದೆ. ಒಬ್ಬರಂತೂ ಆರ್ ಎಸ್ಎಸ್ ನಲ್ಲಿ ಇಲ್ಲಿ ಕಸ ಹಾಕಬಾರದು ಎಂದು ಬೋರ್ಡ್ ಇದೆ ಎಂದು ಟ್ರೋಲ್ ಮಾಡಿದ್ದಾರೆ. ಮತ್ತೆ ಹಲವರು ನೀವು ಬರುತ್ತಾರೆಂದರೂ ಆರ್ ಎಸ್ಎಸ್ ನಿಮ್ಮನ್ನು ಸ್ವೀಕರಿಸಲ್ಲ ಎಂದಿದ್ದಾರೆ.