Select Your Language

Notifications

webdunia
webdunia
webdunia
webdunia

ಜನರ ಎದುರು ಮುಖ ತೋರಿಸಲು ಆಗುತ್ತಿಲ್ಲ ಎಂದ ಅರವಿಂದ್ ಲಿಂಬಾವಳಿ

ಜನರ ಎದುರು ಮುಖ ತೋರಿಸಲು ಆಗುತ್ತಿಲ್ಲ ಎಂದ ಅರವಿಂದ್ ಲಿಂಬಾವಳಿ
Mysore , ಭಾನುವಾರ, 7 ಮೇ 2017 (11:08 IST)
ಮೈಸೂರು: ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಯ ಎರಡನೇ ದಿನದ ಗೋಷ್ಠಿ ಆರಂಭವಾಗಿದೆ.

 
ಆದರೆ ಬಿಜೆಪಿ ನಾಯಕರ ಕಚ್ಚಾಟದಿಂದಾಗಿ ನಮ್ಮ ಮಾನ ಮರ್ಯಾದೆ ಬೀದಿಯಲ್ಲಿ ಹರಾಜಾಗಿದೆ. ಜನರೆದುರು ಮುಖ ತೋರಿಸಲೂ ಆಗುತ್ತಿಲ್ಲ. ಹೀಗಾಗಿ ಮಾಧ್ಯಮಗಳಿಗೆ ನಿರ್ಬಂಧ ಹೇರುವುದು ಅನಿವಾರ್ಯ ಎಂದು ಬಿಜೆಪಿ ನಾಯಕ ಅರವಿಂದ್ ಲಿಂಬಾವಳಿ ಹೇಳಿದ್ದಾರೆ.

ಇಂದು ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ವಿಷಯ ಮಂಡನೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದೆಲ್ಲಕ್ಕಿಂತ ಹೆಚ್ಚು, ಈಶ್ವರಪ್ಪ ಮತ್ತು ಯಡಿಯೂರಪ್ಪ ನಡುವಿನ ಒಳಜಗಳವೇ ಪಕ್ಷದ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ನಿನ್ನೆಯ ಸಭೆಯಲ್ಲಿ ಉಭಯ ನಾಯಕರನ್ನೇ ಮಾಧ್ಯಮಗಳು ಕೇಂದ್ರ ಬಿಂದುವಾಗಿ ವರದಿ ಮಾಡಿ ಪಕ್ಷಕ್ಕೆ ಮುಜುಗುರವುಂಟು ಮಾಡಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಪರೋಕ್ಷವಾಗಿ ಯಡಿಯೂರಪ್ಪಗೆ ಟಾಂಗ್ ನೀಡಿದ ಈಶ್ವರಪ್ಪ