ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ವಿರುದ್ಧ ಬಿಜೆಪಿ ಟ್ವೀಟ್ ವಾರ್ ನಡೆಸಿದೆ. ಗ್ಯಾರಂಟಿ ಯೋಜನೆಗಳನ್ನು ಪೂರೈಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರ ಬೆಲೆ ಏರಿಕೆ ಮಾಡಿ ಜನರನ್ನು ಸಂಕಷ್ಟಕ್ಕೆ ತಂದಿಡಲಿದೆ ಎಂದು ಬಿಜೆಪಿ ಟ್ವೀಟ್ ಮಾಡಿ ಕಿಡಿಕಾರಿದೆ. ರಾಜ್ಯದಲ್ಲಿ ಎಟಿಎಂ ಸರ್ಕಾರದಿಂದ ವರದಿ ಬಿಡುಗಡೆಯಾಗಿದೆ. ನೀರು, ವಿದ್ಯು ತ್ ದರ ಏರಿಕೆ ಬೆನ್ನಲ್ಲೇ ನೀರಿನ ದರ ಹೆಚ್ಚಳ ಮಾಡಿದೆ. ಮದ್ಯ 10ರಿಂದ 20 ರೂಪಾಯಿ ಏರಿಕೆಯಾಗಲಿದೆ. ಹಾಲು-ಪ್ರತೀ ಲೀಟರ್ಗೆ 5 ರೂ. ಏರಿಕೆಯಾಗಿದೆ. ಬಿಎಂಟಿಸಿ ಶೇ.18ರಿಂದ 20ರಷ್ಟು ಏರಿಕೆ ಖಚಿತವಾಗಿದೆ. ಕೆಎಸ್ಆರ್ಟಿಸಿ ಸಾಮಾನ್ಯ ಬಸ್ ಕನಿಷ್ಟ ಶೇ.15 ಏರಿಕೆ, ಪೆಟ್ರೋಲ್/ಡೀಸೆಲ್ ಏರಿಕೆಯಾಗಿದೆ. ರಾಜ್ಯ ತೆರಿಗೆ ಶೇ.5ರಷ್ಟು ಹೆಚ್ಚಳವಾಗಿದೆ. ಕಾಂಗ್ರೆಸ್ ಸರ್ಕಾರದ ಅವಾಸ್ತವಿಕ ಬಿಟ್ಟಿ ಗ್ಯಾರಂಟಿಗಳ ಸೈಡ್ ಎಫೆಕ್ಟ್ ಎಂದು ಬಿಜೆಪಿ ಟ್ವೀಟ್ನಲ್ಲಿ ಕುಟುಕಿದೆ.