2018 ರ ಸಾಲಿನಲ್ಲಿ ನಡೆಯುವ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯದಲ್ಲಿ ಬಿಜಿಪಿಯನ್ನು ಸಂಘಟಿಸಲು 40 ಜನರ ಸಂಭವನೀಯರ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ ನೇತೃತ್ವದ ತಂಡದಲ್ಲಿ 11 ಮಂದಿ ಲಿಂಗಾಯಿತರು, 5 ಒಕ್ಕಲಿಗರು, 7 ದಲಿತರು, 3 ಬ್ರಾಹ್ಮಣ, 1 ಕೊಡವ, 1 ಯಾದವ, 1 ಕುರುಬ, 2 ಜೈನ, 2 ಬಿಲ್ಲವ, 1 ಮರಾಠ ಮುಖಂಡರಿಗೆ ಸ್ಥಾನ ನೀಡುವ ಮೂಲಕ ಎಲ್ಲ ವರ್ಗವನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳ ಪಟ್ಟಿಯಲ್ಲಿ ಶೋಭಾ ಕರಂದ್ಲಾಜೆ, ಗೋವಿಂದ ಕಾರಜೋಳ, ಸಿಟಿ ರವಿ, ಲಕ್ಷ್ಮಣ್ ಸವದಿ, ನಿರ್ಮಲ್ ಸುರಾನ ಹೆಸರಿದೆ ಎಂದು ಹೇಳಲಾಗುತ್ತಿದ್ದು, ಉಪಾಧ್ಯಕ್ಷ ಸ್ಥಾನದ ಪಟ್ಟಿಯಲ್ಲಿ ಸುನೀಲ್ ಕುಮಾರ್, ಶಿವಕುಮಾರ್ ಉದಾಸಿ, ಅನಂತ್‍ಕುಮಾರ್ ಹೆಗಡೆ, ಅಶ್ವತ್ಥ ನಾರಾಯಣ, ಬಿ ಸೋಮಶೇಖರ್, ಅರವಿಂದ ಲಿಂಬಾವಳಿ, ಭಾನು ಪ್ರಕಾಶ್, ಬಾಬು ರಾವ್ ಚೌವ್ಹಾಣ್, ಎಂ ನಾಗರಾಜ್, ಸುರೇಶ್ ಅಂಗಡಿ ಹೆಸರಿದೆ ಎಂದು ಮೂಲಗಳು ತಿಳಿಸಿವೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.