Webdunia - Bharat's app for daily news and videos

Install App

ಸಿದ್ದರಾಮಯ್ಯ ಸರ್ಕಾರಕ್ಕೆ ದಿವಾಳಿ ಮಾಡೆಲ್ ಆಫ್ ಕರ್ನಾಟಕ ಬಿರುದು ನೀಡಿ ಬಿಜೆಪಿ ವ್ಯಂಗ್ಯ

Sampriya
ಬುಧವಾರ, 21 ಮೇ 2025 (20:02 IST)
Photo Courtesy X
ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ನಯಾ ಪೈಸೆ ಕೆಲಸ ಮಾಡದೇ, ನಯಾ ಪೈಸೆ ಅಭಿವೃದ್ಧಿ ಮಾಡದೇ, ಸಾಧನಾ ಸಮಾವೇಶ ಮಾಡಿದೆ. ಇದು ಸಾಧನಾ ಸಮಾವೇಶ ಅಲ್ಲ ಶೋಕಾಚಾರಣೆ ಸಮಾವೇಶ, ದಿವಾಳಿ ಮಾಡೆಲ್‌ ಆಫ್‌ ಕರ್ನಾಟಕ ಎಂದು ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ವ್ಯಂಗ್ಯವಾಡಿದರು.

ರಾಜ್ಯ ಸರ್ಕಾರಕ್ಕೆ ದಿವಾಳಿ ಮಾಡೆಲ್‌ ಆಫ್‌ ಕರ್ನಾಟಕ ಎಂಬ ಹೊಸ ಬಿರುದನ್ನು ಕೊಟ್ಟು ವ್ಯಂಗ್ಯ ಮಾಡಿದ್ದಾರೆ. ಸರ್ಕಾರ ಪ್ರತಿ ದಿನ ಕೂಡ ಸಾಲ ತಗೊಂಡು ಸಂಬಳ ಕೊಡೋ ಪರಿಸ್ಥಿತಿ ಬಂದಿದೆ. ನಮ್ಮ ಡಿಕೆಶಿ ಅಣ್ಣ ಸರಿಯಾಗಿ ಹೇಳಿದ್ದಾರೆ. ತಿಂಗಳಿಗೆ ಕೊಡೋಕೆ ಆಗಲ್ಲ ಹಣವನ್ನು ಎಂದು ಹೇಳಿದ್ದರು. ಅದರ ಅರ್ಥ ಏನು ದುಡ್ಡಿಲ್ಲ ಅಂತ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಟೀಕಸಿದಿರು.

ತಿಂಗಳಿಗೊಮ್ಮೆ 2 ಸಾವಿರ ಫಟಾಫಟ್ ಹಣ ಕೊಡುವುದಾಗಿ ರಾಹುಲ್ ಗಾಂಧಿ ಹೇಳಿದ್ದರು. ಇಲ್ಲಿ ಶಿವಕುಮಾರ್ ಕಟಾಕಟ್, ಯಾವಾಗ ಹಣ ಬರುತ್ತೋ ಆಗ ದುಡ್ಡು ಕೊಡುವುದಾಗಿ ಹೇಳಿದ್ದಾರೆ ಎಂದು ಗಮನ ಸೆಳೆದರು.

ಮುಖ್ಯಮಂತ್ರಿಗಳೇ.. ಯಾವ ಸಾಧನೆಗಾಗಿ ಈ 2 ವರ್ಷದ ಸಂಭ್ರಮಾಚರಣೆ ಮಾಡಿದ್ದೀರಿ? ಏನು ಕಡಿದು ಕಟ್ಟೆ ಹಾಕಿದ್ದೀರಿ? ಎಂದು ಕೇಳಿದರು. ಹಾಲಿನ ದರ ಏರಿಸಿದ್ದೀರಿ. ನೀರು, ವಿದ್ಯುತ್, ಪೆಟ್ರೋಲ್, ಡೀಸೆಲ್, ಆಸ್ತಿ ತೆರಿಗೆ ಇವೆಲ್ಲವನ್ನೂ ಏರಿಸಿದ್ದೀರಿ. ದರ ಏರಿಸಿದ ಪರಿಣಾಮವಾಗಿ ಜನರು ಕಷ್ಟದಲ್ಲಿರುವಾಗ, ಸಮಾವೇಶ ಮಾಡಬೇಕೆಂದು ನಿಮಗೆ ಯಾಕೆ ಅನ್ನಿಸಿದೆ? ಎಂಬ ಪ್ರಶ್ನೆಯನ್ನು ಮುಂದಿಟ್ಟರು.

ಎರಡು ವರ್ಷಗಳಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ ₹187 ಕೋಟಿಯನ್ನು ಫಟಾಫಟ್ ಲೂಟಿ ಮಾಡಿದ್ದೀರಿ. ಇನ್ನೊಂದೆಡೆ ₹89 ಕೋಟಿ ಲೂಟಿ ಆಗಿರುವುದಾಗಿ ಸಿದ್ದರಾಮಯ್ಯನವರೇ ಅಧಿವೇಶನದಲ್ಲಿ ಹೇಳಿದ್ದಾರೆ. ಅದಕ್ಕಾಗಿ ಈ ಸಂಭ್ರಮವೇ? ಮುಡಾ ಹಗರಣದಲ್ಲಿ ವಾಸ್ತು ಪ್ರಕಾರ ಇರುವ 14 ಮೂಲೆ ನಿವೇಶನಗಳನ್ನು ಲೂಟಿ ಹೊಡೆದಿದ್ದಕ್ಕೆ ನಿಮ್ಮ ಈ ಸಂಭ್ರಮಾಚರಣೆಯೇ? ಎಂದು ಕಿಡಿಕಾಡಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತೀರ್ಪಿಗಾಗಿ ಕಾಯುತ್ತಿದ್ದ ಪ್ರಜ್ವಲ್ ರೇವಣ್ಣಗೆ ಶಾಕ್: ಕೋರ್ಟ್ ಹೇಳಿದ್ದೇನು

ಧರ್ಮಸ್ಥಳ ಕೇಸ್: ಪೊಲೀಸರಿಗೂ ಸಂಕಷ್ಟ ತಂದಿಟ್ಟ ಎಸ್ಐಟಿ ಆರ್ಡರ್

Video: ರಷ್ಯಾದಲ್ಲಿ ಭಾರೀ ಭೂಕಂಪ, ಜಪಾನ್, ಅಮೆರಿಕಾದಲ್ಲಿ ಸುನಾಮಿ

ಕೈಲಾಗದ ರಾಹುಲ್ ಗಾಂಧಿ ಮೈ ಪರಚಿಕೊಳ್ತಿದ್ದಾರೆ: ಆರ್ ಅಶೋಕ ವಾಗ್ದಾಳಿ

ಡಾ ದೇವಿಪ್ರಸಾದ್ ಶೆಟ್ಟಿ ಪ್ರಕಾರ ಸುದೀರ್ಘ ಜೀವನ ಗುಟ್ಟು ಇದುವೇ

ಮುಂದಿನ ಸುದ್ದಿ
Show comments