Select Your Language

Notifications

webdunia
webdunia
webdunia
webdunia

ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತ ಕನಸು ನನಸಾಗಲ್ಲ: ಪರಮೇಶ್ವರ್

ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತ ಕನಸು ನನಸಾಗಲ್ಲ: ಪರಮೇಶ್ವರ್
ಬೆಂಗಳೂರು , ಭಾನುವಾರ, 4 ಜೂನ್ 2017 (13:04 IST)
ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತ ಕನಸು ಯಾವತ್ತೂ ನನಸಾಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷರಾದ ಜಿ.ಪರಮೇಶ್ವರ್ ಹೇಳಿದ್ದಾರೆ.
 
ನಗರದಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಧಿಗಿಂತ ಮುಂಚೆ ಚುನಾವಣೆ ನಡೆಯುವ ಸಾಧ್ಯತೆಗಳಿಲ್ಲ. 2018ರ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯಬೇಕಾಗಿದೆ ಎಂದು ತಿಳಿಸಿದ್ದಾರೆ.
 
ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು ಎನ್ನುವ ಇಚ್ಚೆಯಿದೆ. ಟಿಕೆಟ್ ಕೊಡುವುದು ಪಕ್ಷದ ಹೈಕಮಾಂಡ್‌‌ಗೆ ಬಿಟ್ಟ ವಿಷಯವಾಗಿದೆ. ಟಿಕೆಟ್ ಕೊಡುವ ಅಧಿಕಾರ ಇರೋದು ಹೈಕಮಾಂಡ್‌ಗೆ ಮಾತ್ರ ಎಂದರು.
 
ಗೃಹ ಸಚಿವ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದ್ದೇನೆ. ಆದರೆ, ಸಿಎಂ ಸಿದ್ದರಾಮಯ್ಯ ನನ್ನ ರಾಜೀನಾಮೆಯನ್ನು ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿಲ್ಲ ಗೃಹ ಸಚಿವನಾಗಿ ಮುಂದುವರಿಯುವ ಬಗ್ಗೆ ನಾಳೆ ನಿರ್ಧಾರವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮೆಕ್ಸಿಕನ್ನರು ಟ್ರಂಪ್ ಮೇಲಿನ ಸೇಡಿಗೆ ತಯಾರಿಸಿದ್ರು ಟ್ರಂಪ್‌ ಬ್ರಾಂಡ್‌ ಟಾಯ್ಲೆಟ್‌ ಪೇಪರ್