Select Your Language

Notifications

webdunia
webdunia
webdunia
webdunia

ರಾಜ್ಯ ಬಿಜೆಪಿಗೆ ಮೋದಿ ಬಲವೊಂದೇ ಸಾಕೇ?

ರಾಜ್ಯ ಬಿಜೆಪಿಗೆ ಮೋದಿ ಬಲವೊಂದೇ ಸಾಕೇ?
ಬೆಂಗಳೂರು , ಮಂಗಳವಾರ, 6 ಮಾರ್ಚ್ 2018 (08:44 IST)
ಬೆಂಗಳೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರುವ ಕನಸು ಕಾಣುತ್ತಿರುವ ಬಿಜೆಪಿಗೆ ಏನೋ ಒಂದು ಕೊರತೆ ಕಾಣುತ್ತಿದೆ.

ಈಗಾಗಲೇ ಹಲವು ರಾಜ್ಯಗಳಲ್ಲಿ ಗೆದ್ದು ಬೀಗುತ್ತಿರುವ ಬಿಜೆಪಿಗೆ ಇಲ್ಲಿ ಗೆಲುವು ಅಷ್ಟು ಸುಲಭವಲ್ಲ. ಬಿಜೆಪಿ ನಾಯಕರೊಳಗಿನ ಕಚ್ಚಾಟ, ಅವಕಾಶ ಸಿಕ್ಕಾಗ ಎದುರಾಳಿಗಳಿಗೆ ಸರಿಯಾದ ರೀತಿಯಲ್ಲಿ ಗುದ್ದುಕೊಡುವ ಝಲಕ್ ಇಲ್ಲದೇ ರಾಜ್ಯ ಬಿಜೆಪಿ ಸೊರಗಿದೆ.

ಹೀಗಾಗಿ ರಾಷ್ಟ್ರ ನಾಯಕರೇ ಬಿಜೆಪಿಗೆ ಬಲ. ಆದರೆ ಪ್ರಧಾನಿ ಮೋದಿಯ ಮಾತಿನ ಬಲವೊಂದರಿಂದಲೇ ಗೆಲುವು ಸುಲಭವಲ್ಲ. ಅಷ್ಟೇ ಅಲ್ಲ, ಆಗಾಗ ನಡೆಸುವ ಪಾದ ಯಾತ್ರೆಗಳು, ರ್ಯಾಲಿಗಳು ಮತ ಗಳಿಸಲು ಸಾಕಾಗಲ್ಲ.

ಕಳೆದ ಬಾರಿ ಅಧಿಕಾರದಲ್ಲಿದ್ದಾಗ ಬಿಜೆಪಿ ನಾಯಕರ ಕಚ್ಚಾಟವನ್ನು ಜನ ಮರೆತಿಲ್ಲ. ಅಷ್ಟೇ ಅಲ್ಲ, ಸಿಎಂ ಸಿದ್ದರಾಮಯ್ಯನವರ ನಾಯಕತ್ವ ಮೆಚ್ಚಿಕೊಂಡ ಜನರಿದ್ದಾರೆ. ಹಾಗಿರುವಾಗ ಅವರನ್ನೇ ಟಾರ್ಗೆಟ್ ಮಾಡುವ ಮೋದಿ ಭಾಷಣಗಳು ಹೆಚ್ಚು ಪ್ರಯೋಜನವಾಗದು.

ಸದ್ಯಕ್ಕೆ ಬಿಜೆಪಿಗೆ ಬೇಕಾಗಿರುವುದು ಹೊಸ ಭರವಸೆ ನೀಡುವ ನಾಯಕತ್ವ. ಅದಕ್ಕೆ ಪಕ್ಷದೊಳಗಿ ನಾಯಕರು ಭಿನ್ನಮತ ಮರೆಯಬೇಕು, ಏಕತೆ ಮೆರೆಯಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ಬಲಹೀನತೆಯೇ ಇದು!