Select Your Language

Notifications

webdunia
webdunia
webdunia
webdunia

ಬಿಜೆಪಿಯವರಿಗೆ ತಾಕತ್ತಿದ್ರೆ ಕಪ್ಪು ಹಣ ತಂದು ಜನತೆಗೆ ಹಂಚಲಿ: ರಾಮಲಿಂಗಾರೆಡ್ಡಿ

ಬಿಜೆಪಿಯವರಿಗೆ ತಾಕತ್ತಿದ್ರೆ ಕಪ್ಪು ಹಣ ತಂದು ಜನತೆಗೆ ಹಂಚಲಿ: ರಾಮಲಿಂಗಾರೆಡ್ಡಿ
ಚಿಕ್ಕಬಳ್ಳಾಪುರ , ಶುಕ್ರವಾರ, 10 ಮಾರ್ಚ್ 2017 (17:46 IST)
ಬಿಜೆಪಿ ನಾಯಕರಿಗೆ ಕೃತಿಗಿಂತ ಮಾತೇ ಬಂಡವಾಳವಾಗಿದೆ. ತಾಕತ್ತಿದ್ರೆ ವಿದೇಶದಲ್ಲಿರುವ ಕಪ್ಪು ಹಣ ತಂದು ಜನರಿಗೆ ಹಂಚಬೇಕಾಗಿತ್ತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
 
ಕಪ್ಪು ಹಣ ಇಟ್ಟಿರುವವರನ್ನು ಕೇಂದ್ರ ಸರಕಾರ ಜೈಲಿಗೆ ಕಳುಹಿಸಲಿ. ಅಸಲಿಗೆ ವಿದೇಶದಲ್ಲಿ ಕಪ್ಪು ಹಣ ಇದ್ದರೆ ತಾನೇ?ಎಂದು ಲೇವಡಿ ಮಾಡಿದ್ದಾರೆ.
 
ಉತ್ತರ ಕುಮಾರನ ಪೌರುಷ ಒಲೆಯ ಮುಂದೆ ಎನ್ನುವಂತೆ ಬಿಜೆಪಿ ನಾಯಕರ ಪೌರುಷ ಕೇವಲ ಹೇಳಿಕೆ ನೀಡುವುದರಲ್ಲಿಯೇ  ಸೀಮಿತವಾಗಿದೆ ಎಂದು ಕಿಡಿಕಾರಿದ್ದಾರೆ. 
 
ಬಿಜೆಪಿಯವರಿಗೆ ಸಿಎಂ ಸಿದ್ದರಾಮಯ್ಯ ಸರಕಾರದ ಜನಪ್ರಿಯತೆ ಸಹಿಸಲು ಆಗುತ್ತಿಲ್ಲ. ಆದ್ದರಿಂದಲೇ ಇಲ್ಲ ಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಟಾಂಗ್ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯಗೆ ಅನ್ನದಾನ ಭಾರತಿ ಮಹಾಸ್ವಾಮಿ ಬೆದರಿಕೆ