Select Your Language

Notifications

webdunia
webdunia
webdunia
webdunia

ಶಾಸಕ ವಿ ಸುನಿಲ್ ಕುಮಾರ್ ಗೆ ಪಿತೃ ವಿಯೋಗ

V Sunil Kumar father

Krishnaveni K

ಕಾರ್ಕಳ , ಗುರುವಾರ, 17 ಜುಲೈ 2025 (09:37 IST)
ಕಾರ್ಕಳ: ಬಿಜೆಪಿ ಶಾಸಕ ವಿ ಸುನಿಲ್ ಕುಮಾರ್ ತಂದೆ ಎಂಕೆ ವಾಸುದೇವ್ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ತಂದೆ ವಾಸುವೇವ್ ಕೂಡಾ ಆರ್ ಎಸ್ಎಸ್ ನಲ್ಲಿ ಸಕ್ರಿಯರಾಗಿದ್ದರು. ತಂದೆಯ ಪ್ರೇರಣೆಯಿಂದಲೇ ವಿ ಸುನಿಲ್ ಕುಮಾರ್ ಕೂಡಾ ಆರ್ ಎಸ್ಎಸ್ ಸೇರಿಕೊಂಡರು. ಬಳಿಕ ರಾಜಕೀಯಕ್ಕೆ ಪ್ರವೇಶ ಮಾಡಿದ್ದರು.

ಇದೀಗ ವಾಸುದೇವ್ ತಮ್ಮ 87 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನಕ್ಕೆ ಬಿವೈ ವಿಜಯೇಂದ್ರ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದ ಅವರು ಹಲವು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು ಎಂದು ತಿಳಿಸಿದ್ದಾರೆ.

ಮೃತರ ಕುಟುಂಬ, ಬಂಧುಮಿತ್ರರು ಮತ್ತು ಅಭಿಮಾನಿಗಳಿಗೆ ಅಗಲುವಿಕೆಯ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಎರಡು ದಿನ ಭಾರೀ ಮಳೆ, ಕರಾವಳಿಗೆ ಇಂದೂ ಮಳೆಯಿರುತ್ತಾ ನೋಡಿ