Select Your Language

Notifications

webdunia
webdunia
webdunia
webdunia

ಪ್ರಜ್ವಲ್ ವಿಡಿಯೋ ಗೊತ್ತಿದ್ದೂ ಜೆಡಿಎಸ್ ಜತೆ ಮೈತ್ರಿ ಮಾಡಿ ಬಿಜೆಪಿ ತಪ್ಪು ಮಾಡಿದೆ: ಸಿಎಂ

ಪ್ರಜ್ವಲ್ ವಿಡಿಯೋ ಗೊತ್ತಿದ್ದೂ ಜೆಡಿಎಸ್ ಜತೆ ಮೈತ್ರಿ ಮಾಡಿ ಬಿಜೆಪಿ ತಪ್ಪು ಮಾಡಿದೆ: ಸಿಎಂ

Sampriya

ಬೆಂಗಳೂರು , ಬುಧವಾರ, 1 ಮೇ 2024 (19:28 IST)
ಬೆಂಗಳೂರು:  ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಗೊತ್ತಿದ್ದೂ ಮೈತ್ರಿ ಅಭ್ಯರ್ಥಿಯಾಗಿ ಟಿಕೆಟ್ ನೀಡಿ ತಪ್ಪು ಮಾಡಿದ್ದಲ್ಲದೆ ವಿದೇಶಕ್ಕೆ ಓಡಿ ಹೋಗಲು ನೆರವು ಮಾಡಿದ್ದು  ಇನ್ನೊಂದು ತಪ್ಪು ಎಂದು ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ಕುಟುಕಿದ್ದಾರೆ.  

ಈ ಸಂಬಂಧ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು,  ಸಂಸದ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವೀಡಿಯೋ ಹಗರಣ ಗೊತ್ತಿದ್ದೂ ಕೂಡ ಬಿಜೆಪಿ ಪಕ್ಷ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದು ಮೊದಲ ತಪ್ಪು, ಅವರಿಗೆ ಮೈತ್ರಿ ಅಭ್ಯರ್ಥಿಯಾಗಿ ಟಿಕೇಟ್‌ ನೀಡಿದ್ದು ಎರಡನೇ ತಪ್ಪು, ಹಗರಣ ಬೆಳಕಿಗೆ ಬಂದ ಮೇಲೆ ಅವರನ್ನು ವಿದೇಶಕ್ಕೆ ಓಡಿ ಹೋಗಲು ಬಿಟ್ಟಿದ್ದು ಇನ್ನೊಂದು ತಪ್ಪು. ಪ್ರಧಾನಿ ಮೋದಿ ಅವರೇ ಅವರೇ, ಇದೇನಾ ನಿಮ್ಮ ಮಾತೃಶಕ್ತಿಯ ಆರಾಧನೆ ಎಂದರೆ ಇದೇನಾ ಎಂದು ಎಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ.

ಸಿಎಂ ಬರೆದ ಎಕ್ಸ್‌ ಪೋಸ್ಟ್ ಹೀಗಿದೆ:  ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವೀಡಿಯೋ ಹಗರಣ ಗೊತ್ತಿದ್ದೂ ಕೂಡ @BJP4India
 ಪಕ್ಷ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದು ಮೊದಲ ತಪ್ಪು, ಅವರಿಗೆ ಮೈತ್ರಿ ಅಭ್ಯರ್ಥಿಯಾಗಿ ಟಿಕೇಟ್‌ ನೀಡಿದ್ದು ಎರಡನೇ ತಪ್ಪು, ಹಗರಣ ಬೆಳಕಿಗೆ ಬಂದ ಮೇಲೆ ಅವರನ್ನು ವಿದೇಶಕ್ಕೆ ಓಡಿ ಹೋಗಲು ಬಿಟ್ಟಿದ್ದು ಇನ್ನೊಂದು ತಪ್ಪು.
ಪ್ರಧಾನಿ @narendramodi
 ಅವರೇ, ಇದೇನಾ ನಿಮ್ಮ ಮಾತೃಶಕ್ತಿಯ ಆರಾಧನೆ ಎಂದರೆ?

ಇನ್ನೂ ಸದ್ಯ ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣ ಅವರನ್ನು ಸ್ವದೇಶಕ್ಕೆ ಕರೆತರಲು ಸಹಾಯ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಹೀಗಿದೆ:

ಮಹಿಳಾ ದೌರ್ಜನ್ಯದಂತಹ ಗುರುತರ ಆರೋಪ ಹೊತ್ತಿರುವ ಹಾಲಿ‌ ಸಂಸದ ಹಾಗೂ ಎನ್‌ಡಿಎ ಮೈತ್ರಿಕೂಟದ ಲೋಕಸಭಾ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ ರಚಿಸಿದೆ.

ಈ ನಡುವೆ ಆರೋಪಿಯು ರಾಜತಾಂತ್ರಿಕ ಪಾಸ್‌ಪೋರ್ಟನ್ನು ಬಳಕೆ ಮಾಡಿಕೊಂಡು ವಿದೇಶಕ್ಕೆ ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ. ಎಸ್.ಐ.ಟಿ ಯು ತನಿಖೆಯನ್ನು ಮುಂದುವರೆಸಬೇಕಾದರೆ ಆರೋಪಿಯ ವಿಚಾರಣೆ ನಡೆಸುವ ಅಗತ್ಯವಿದೆ. ಹಾಗಾಗಿ ವಿದೇಶಾಂಗ ಸಚಿವಾಲಯ ಮತ್ತು ಗೃಹ ಸಚಿವಾಲಯಗಳು ತಕ್ಷಣ ಕಾರ್ಯಪ್ರವೃತ್ತವಾಗಿ ರಾಜತಾಂತ್ರಿಕ ಪಾಸ್‌ಪೋರ್ಟ್ ಹಿಂಪಡೆಯುವ ಜೊತೆಗೆ ಅಂತಾರಾಷ್ಟ್ರೀಯ ಪೊಲೀಸ್ ಏಜೆನ್ಸಿಗಳನ್ನು ಬಳಸಿಕೊಂಡು ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಅವರನ್ನು ಮರಳಿ ಭಾರತಕ್ಕೆ ಕರೆತರಲು ನೆರವಾಗಬೇಕು ಎಂದು ಪ್ರಧಾನಿ @narendramodi
 ಅವರಿಗೆ ಪತ್ರ ಬರೆದಿದ್ದೇನೆ.

Share this Story:

Follow Webdunia kannada

ಮುಂದಿನ ಸುದ್ದಿ

ನಮಗೆ ಅಪಮಾನ ಮಾಡಬೇಕೆಂಬ ಕುತಂತ್ರ ನಡೆಯುತ್ತಿದೆ: ಕೆ ಎಸ್ ಈಶ್ವರಪ್ಪ