ನಗರದಲ್ಲಿ ಮಾತನಾಡಿದ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನಿನ್ನ ನೇತೃತ್ವಲ್ಲಿ ಪಕ್ಷ ದೊಡ್ಡದಾಗಿ ಬೆಳೆಯಲಿ ಎಂದು ಹಲವು ನಾಯಕರು ಹಾರೈಸಿದ್ದಾರೆ.ಪಕ್ಷದಲ್ಲು ಎಲ್ಲರನ್ನು ವಿಶ್ವಾಸಕ್ಕೆ ತಗೊಂಡು ಕೆಲಸ ಮಾಡುತ್ತೇನೆ.ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಹೆಸರುಗಳ ಬಗ್ಗೆ ಚರ್ಚೆ ಆಯ್ತು.ಆದರೆ ಪಕ್ಷದ ಭವಿಷ್ಯದ ದೃಷ್ಟಿಯಿಂದ ನನಗೆ ವರಿಷ್ಠರು ಅವಕಾಶ ಮಾಡಿಕೊಟ್ಟಿದ್ದಾರೆ.ಅದಕ್ಕಾಗಿ ನನಗೆ ಹೆಮ್ಮೆ ಇದೆ, ತುಂಬಾ ಸಂತೋಷ ಇದೆ.ಶುಕ್ರವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.ಅದಕ್ಕೆ ಕೇಂದ್ರದಿಂದ ವೀಕ್ಷಕರು ಬರ್ತಾರೆ.ಬಹುತೇಕ ಅಂದೇ ವಿಪಕ್ಷ ನಾಯಕನ ಆಯ್ಕೆ ಆಗುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ವಿಜಯೇಂದ್ರ ನೇಮಕದಿಂದ ಕುಟುಂಬ ರಾಜಕಾರಣ ಅನ್ನೋದು ಇಲ್ಲ ಎಂಬುದು ಸುಳ್ಳು ಆಗೋಯ್ತಾ ಎಂಬ ಕಾಂಗ್ರೆಸ್ ಟೀಕೆ ವಿಚಾರವಾಗಿ ಇದೆಲ್ಲದಕ್ಕೂ ಮುಂದೆ ತಕ್ಕ ಉತ್ತರ ಕೊಡ್ತೀನಿ.ಯಡಿಯೂರಪ್ಪ ಮಗ ಅಂತಾ ನನಗೆ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿಲ್ಲ.ಆ ರೀತಿ ಇದ್ದಿದ್ದರೆ ಹಿಂದೆಯೇ ಬೊಮ್ಮಾಯಿ ಸಿಎಂ ಆಗಿದ್ದಾಗ ನನಗೆ ಮಂತ್ರಿ ಅವಕಾಶ ಸಿಗುತ್ತಿತ್ತು.ನಾನು ಯಡಿಯೂರಪ್ಪರ ಮಗ ಅನ್ನಿಸಿಕೊಳ್ಳೋಕೆ ಹೆಮ್ಮೆ ಇದೆ.ಯಡಿಯೂರಪ್ಪರಂತೆ ಪಕ್ಷಕ್ಕೆ ಅನೇಕ ಹಿರಿಯರ ಶ್ರಮ ಇದೆ.ಸಂಘಟನೆಯ ಶಕ್ತಿ ಯಿಂದ ಈ ಪಕ್ಷ ಈ ಮಟ್ಟಕ್ಕೆ ಬಂದಿದೆ.ಬಿಜೆಪಿಯನ್ನು ಇನ್ನೂ ಸದೃಢ ಗೊಳಿಸಲು ಕೆಲಸ ಮಾಡುತ್ತೇನೆ.ವಿಧಾನಸಭೆ ಯಲ್ಲಿ 25ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ಬಿಎಸ್ ವೈ ಹೇಳಿಕೆ ವಿಚಾರಕ್ಕೆ ಯಡಿಯೂರಪ್ಪ ಯಾವಾಗಲೂ ಗುರಿ ಇಟ್ಟರೆ ಹಿಂದೆ ಸರಿಯುವುದಿಲ್ಲ.ಅವರ ಮಾತಿನಂತೆ 25 ಸ್ಥಾನಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ.
ವಿಜಯೇಂದ್ರ ರಾಜ್ಯಾಧ್ಯಕ್ಷರಾಗು ನೇಮಕದಿಂದ ಸೋಮಣ್ಣಗೆ ಅಸಮಾಧಾನ ವಿಚಾರವಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ,ಇದರಲ್ಲಿ ಯಾರದ್ದು ವ್ಯೆಯಕ್ತಿಕ ಪ್ರತಿಷ್ಠೆ ಅನ್ನೋದಿಲ್ಲ.ಪಕ್ಷ ಅಂದ ಮೇಲೆ ಎಲ್ಲರೂ ಒಟ್ಟಾಗಿ ಹೋಗಬೇಕು ಎಂದು ಪರೋಕ್ಷವಾಗಿ ಸೋಮಣ್ಣ ಗೆ ವಿಜಯೇಂದ್ರ ಟಾಂಗ್ ಕೊಟ್ಟಿದ್ದಾರೆ.