Daily Horoscope
✕

ಸಿಎಂ ರಾಜೀನಾಮೆಗೆ ಆಗ್ರಹಿಸಿ ಚೊಂಬು ಹಿಡಿದು ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು

ಕೃಷ್ಣವೇಣಿ ಕೆ
ಬುಧವಾರ, 23 ಸೆಪ್ಟಂಬರ್ 2026 (13:00 IST)
ಬೆಂಗಳೂರು: ಹಣಕಾಸು ಇಲಾಖೆ ನಿಭಾಯಿಸಲು ಇವರಿಂದ ಆಗುತ್ತಿಲ್ಲ. ಆದ್ದರಿಂದ ನೀವು ಮುಖ್ಯಮಂತ್ರಿ ಆಗಿರೋಕೆ ಲಾಯಕ್ಕಿಲ್ಲ. ತಕ್ಷಣವೇ ರಾಜೀನಾಮೆ ಕೊಡಿ. ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಅವರು ಆಗ್ರಹಿಸಿದ್ದಾರೆ.
 
ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಇಂದು ಬೆಳಿಗ್ಗೆ ಬಿಜೆಪಿ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಿಮ್ಮ ಹಣಕಾಸು ಇಲಾಖೆ ನಿಯಂತ್ರಿಸಲು ನಿಮಗೆ ಶಕ್ತಿ ಇಲ್ಲ ಎಂದು ಆಕ್ಷೇಪಿಸಿದರು.
 
ಇದು ಪಾಪರ್ ಸರ್ಕಾರ ಇವತ್ತು ಕರ್ನಾಟಕದಲ್ಲಿ ಸರ್ಕಾರ ನಡೆಸುವಂತ ಯೋಗ್ಯತೆಯನ್ನು ಕಳೆದುಕೊಂಡಿದ್ದಾರೆ ಇವತ್ತು. ಹಣ ಇಲ್ಲದೆ ಕಾಂಗ್ರೆಸ್ ಪಾರ್ಟಿಯ ಕರ್ನಾಟಕದಲ್ಲಿ ಡಿ.ಕೆ. ಶಿವಕುಮಾರ್ ಸರ್ಕಾರ ಹಣದ ಕೊರತೆ ದಿವಾಳಿ ಆಗಿರೋದಕ್ಕೆ ಒಂದು ಹಣಕಾಸು ಇಲಾಖೆಯವರು ಒಂದು ಶ್ವೇತಪತ್ರನೇ ಬಿಡುಗಡೆ ಮಾಡಿಬಿಟ್ಟಿದ್ದಾರೆ ಎಂದು ಗಮನ ಸೆಳೆದರು. 
 
 ಡಿ.ಕೆ. ಶಿವಕುಮಾರಣ್ಣ ನೀನು ಎಲ್ಲಿ ಮೊನ್ನೆ ಮಂಗಳೂರಿಗೆ ಹೋಗಿದ್ದೆ, 32 ಸಾವಿರ ಕೋಟಿ, ಮಂಗಳೂರಲ್ಲಿ ಮೀನು ತಿಂದ್ಮೇಲೆ 32 ಸಾವಿರ ಕೋಟಿ ಘೋಷಿಸಿದ್ದಾರೆ. ಗುಲ್ಬರ್ಗಾಗೆ ಹೋಗಿದ್ರಿ ಸಿದ್ದರಾಮಯ್ಯನವರು ಅಲ್ಲಿ 40 ಸಾವಿರ ಕೋಟಿ, ಚಾಮರಾಜನಗರಕ್ಕೆ ಹೋಗಿದ್ರಿ 20 ಸಾವಿರ ಕೋಟಿ, ಅಲ್ಲಿ ಇಲ್ಲಿ ಕ್ಯಾಬಿನೆಟ್ ಮಾಡಿದ್ವಿ 25 ಸಾವಿರ ಕೋಟಿ, ಬಾಗಲಕೋಟೆಯಲ್ಲಿ ಕ್ಯಾಬಿನೆಟ್ ಅಲ್ಲಿ ಒಂದು 50 ಸಾವಿರ ಕೋಟಿ ಪ್ರಕಟಿಸಿದ್ದೀರಿ ಎಂದು ಟೀಕಿಸಿದರು.
 
ಕಾಂಗ್ರೆಸ್ ಪಾರ್ಟಿ ಖಾಲಿ ಡಬ್ಬ ಅನ್ನೋದು ಇವತ್ತು ಸ್ಪಷ್ಟ ಆಗ್ತಾ ಇದೆ. ಜನರ ಪಾಲಿಗೆ ಚೊಂಬು ಬರಕ್ಕೆ ದುಡ್ಡು ಕೊಡೋಕಾಗಿಲ್ಲ ನಾಲ್ಕು ತಿಂಗಳು ಆಯ್ತು ಬರ ಐದು ತಿಂಗಳಿಂದ ಪೆನ್ಷನ್ ಹಣ ಕೊಟ್ಟಿಲ್ಲ. ಐದು ತಿಂಗಳು ಆಯ್ತು; ಬಡವರು ಸಾಯ್ತಾ ಇದ್ದಾರೆ. ಶಿಕ್ಷಕರಿಗೆ ಸಂಬಳ ಇಲ್ಲ, ರೈತರಿಗೆ ಕರೆಂಟ್ ಇಲ್ಲ. ಹಾಲು ಉತ್ಪಾದಕರು ಯಾರಿದ್ದಾರೋ ಅವರಿಗೆ 12 ತಿಂಗಳಿಂದ ಅವರಿಗೆ ಸಬ್ಸಿಡಿ ಹಣ ಕೊಟ್ಟಿಲ್ಲ, ಸಾವಿರಾರು ರೂಪಾಯಿ ಕೊಡಬೇಕು ಎಂದು ಆಕ್ಷೇಪಿಸಿದರು.
 
 ಕ್ಯಾಬಿನೆಟ್ ಮಾಡಿದ್ದೆ ಮಾಡಿದ್ದು; ಏನು ಹೇಳಿದ್ದು ಹೇಳಿದ್ದೆ, ಘೋಷಣೆ. ಘೋಷಣೆಗಳ ಸರ್ಕಾರ, ಬೋಗಸ್ ಸರ್ಕಾರ. ಇವತ್ತು ಹಣಕಾಸು ಇಲಾಖೆಯವರು ಹೇಳಿದ್ದಾರೆ, ನೀವೊಬ್ಬರು ನಾಲಾಯಕ್ ಅನ್ನೋ ರೀತಿ ಅವರು ಹೇಳಿಲ್ಲ, ಆದರೆ ಅದರ ಅರ್ಥ ನೀವು ಫೈನಾನ್ಸ್ ಇಲಾಖೆಯನ್ನು ಅರ್ಥ ಮಾಡಿಕೊಂಡೆ, ನಿಮಗೆ ಮನಸ್ಸಿಗೆ ಬಂದಂಗೆ ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ ಅನೌನ್ಸ್ ಮಾಡ್ಕೊಂಡು ಹೋಗ್ತಾ ಇದ್ದೀರಾ. ನ್ಯಾಯವೇ? ಎಂದು ಕೇಳಿದರು.
ಹಣಕಾಸು ಇಲಾಖೆಯವರು ಕೇಳುತ್ತಿದ್ದಾರೆ. ಮನಸ್ಸಿಗೆ ಬಂದಂಗೆ ಅನೌನ್ಸ್ ಮಾಡ್ಕೊಂಡು ಹೋಗ್ತಾ ಇದ್ದೀಯಲ್ಲಪ್ಪ ನ್ಯಾಯವೇ? ಫೈನಾನ್ಸ್ ಡಿಪಾಟ್ಮೆರ್ಂಟ್ ಅಲ್ಲಿ ಹಣನೇ ಇಲ್ಲ, ಸಾಲ ಕೊಡೋ ಗತಿಯೇ ಇಲ್ಲ ಇವತ್ತು ನಮಗೆ. ಕರ್ನಾಟಕ ಸರ್ಕಾರಕ್ಕೆ ಸಾಲ ಕೊಡಲ್ಲ ಅಂತ ಬರೆದುಕೊಟ್ಟಿದ್ದಾರೆ ಎಂದು ತಿಳಿಸಿದರು.
 
ಸಿದ್ದರಾಮಯ್ಯನವರು 22 ಸಾವಿರ ಕೋಟಿ ಕೊರತೆ ಮಾಡಿ ತೆರಳಿದ್ದಾರೆ. 2 ಲಕ್ಷ ಕೋಟಿ ಬಿಲ್ ಬಾಕಿ ಇದೆ ಎಂದು ಹಣಕಾಸು ಇಲಾಖೆಯವರು ಹೇಳಿದ್ದಾರೆ. ಸಾರಿಗೆ ಇಲಾಖೆಗೆ 5,000 ಕೋಟಿ ಬಾಕಿ ಇದೆ. ವಿದ್ಯುತ್ ಇಲಾಖೆಗೆ ಸಬ್ಸಿಡಿ ಬಾಕಿ ಇದೆ. ನೀವು ಮಂಗಳೂರಲ್ಲಿ ಘೋಷಣೆ, ಬೆಂಗಳೂರಲ್ಲಿ ಘೋಷಣೆ ಮಾಡುತ್ತೀರಿ ಎಂದು ಟೀಕಿಸಿದರು. ಡಿ.ಕೆ. ಶಿವಕುಮಾರ್ ಸರ್ಕಾರವನ್ನು ಬೆತ್ತಲೆ ಮಾಡಿಬಿಟ್ಟಿದ್ದಾರೆ. ಒಂದು ಭಿಕಾರಿ ತರ ಇವತ್ತು ಸರ್ಕಾರ ಇವತ್ತು ಕರ್ನಾಟಕದಲ್ಲಿ ಇರೋದು ಭಿಕಾರಿ ಸರ್ಕಾರ ಎಂದು ಆರೋಪಿಸಿದರು.
 
ಬರಕ್ಕೆ ಒಂದು ಪೈಸೆ ಸಾಲ ಕೊಡಲ್ಲ ಅಂತ ಬರೆದಿದ್ದಾರೆ. ನಾಚಿಕೆ ಆಗಲ್ವಾ ನಿಮಗೆ? ಏನು ಆಕಾಶನೇ ಇಳಿಸೋ ರೀತಿ ಮಾತಾಡ್ತಾ ಇದ್ದೀರಿ ಎಂದರು. ನಿಮಗೆ ಅಧಿಕಾರ ಕೊಟ್ಟರೆ ನೀವು ರಾಹುಲ್ ಗಾಂಧಿಗೋಸ್ಕರ ಹಣ ಸಂಗ್ರಹಿಸುತ್ತಾ ಇದ್ದೀರಿ ಎಂದು ದೂರಿದರು. ಪೆನ್ಷನ್ ಸಕಾಲಕ್ಕೆ ಕೊಡುತ್ತಿಲ್ಲ.  ಆದರೆ ಎಟಿಎಂ ಮಾತ್ರ ರಾಹುಲ್ ಗಾಂಧಿಗೆ ಹೋಗೋ ಎಟಿಎಂ ಕರೆಕ್ಟ್ ಆಗಿ ಟೈಮ್ ಟು ಟೈಮ್ ಹೋಗುತ್ತಿದೆ ಎಂದು ಆರೋಪಿಸಿದರು. 

Related News

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments