Select Your Language

Notifications

webdunia
webdunia
webdunia
webdunia

ಬಿಜೆಪಿ ಮುಳಿಗಿಸಲು ಬಿಜೆಪಿ ನಾಯಕರೇ ಸಾಕು– ಯು.ಟಿ.ಖಾದರ್

ಬಿಜೆಪಿ ಮುಳಿಗಿಸಲು ಬಿಜೆಪಿ ನಾಯಕರೇ ಸಾಕು– ಯು.ಟಿ.ಖಾದರ್
ಬೆಂಗಳೂರು , ಬುಧವಾರ, 3 ಜನವರಿ 2018 (20:10 IST)
ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಮುಳುಗಿಸಲು ಬಿಜೆಪಿ ಪಕ್ಷದ ನಾಯಕರೇ ಸಾಕು ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ ಖಾದರ್ ವ್ಯಂಗವಾಡಿದ್ದಾರೆ.
 
ವಿಕಾಸಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಅನಂತ್ ಕುಮಾರ್ ಹೆಗ್ಡೆ, ಸಂಸದರಾ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು, ಪ್ರತಾಪ್ ಸಿಂಹ ಮತ್ತು ಮುಖಂಡ ಗೋ.ಮಧುಸೂದನ್ ಅವರೇ ಬಿಜೆಪಿ ಪಕ್ಷವನ್ನು ಮುಳುಗಿಸುತ್ತಾರೆ ಎಂದಿದ್ದಾರೆ.
 
ಒಬ್ಬರು ಸಂವಿಧಾನ ಬದಲಾಯಿಸಬೇಕು ಎಂದರೆ, ಇನ್ನೊಬ್ಬರು ಬೆಂಕಿ ಹಚ್ಚಬೇಕು ಎನ್ನುತ್ತಾರೆ. ಇಂತಹವರನ್ನು ಚುನಾವಣೆಯಲ್ಲಿ ಜನರು ಗೆಲ್ಲಿಸುವುದಿಲ್ಲ. ಜೈಲಿಗೆ ಹೋದವರನ್ನ ಜನರು ಮರೆಯುತ್ತಾರೆ. ಆದರೆ ಅನ್ನ, ಕ್ಷೀರ, ಮನೆ ಕೊಟ್ಟವರನ್ನ ಮರೆಯುವುದಿಲ್ಲ ಎಂದು ತಿಳಿಸಿದ್ದಾರೆ.
 
ಗುಜರಾತ್‍ನಲ್ಲೇ ಮೋದಿ ಹವಾ ಕೆಲಸ ಮಾಡಿಲ್ಲ. ಕರ್ನಾಟಕದಲ್ಲಿ ಮೋದಿ ಹವಾ ನಡೆಯುತ್ತಾ ಎಂದು ಪ್ರಶ್ನಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ತ್ರಿವಳಿ ತಲಾಖ್ ವಿಧೇಯಕ ವಿಷಯದಲ್ಲಿ ಕಾಂಗ್ರೆಸ್ ದ್ವಿಮುಖ ನೀತಿ– ಅರುಣ್ ಜೇಟ್ಲಿ