Select Your Language

Notifications

webdunia
webdunia
webdunia
webdunia

ನಡುರಸ್ತೆಯಲ್ಲೇ ಕಚ್ಚಾಡಿಕೊಂಡ ಬಿಜೆಪಿ ನಾಯಕರು

ನಡುರಸ್ತೆಯಲ್ಲೇ ಕಚ್ಚಾಡಿಕೊಂಡ ಬಿಜೆಪಿ ನಾಯಕರು
ಹುನಗುಂದ , ಗುರುವಾರ, 6 ಜುಲೈ 2017 (13:30 IST)
ಬಾಗಲಕೋಟೆ ಜಿಲ್ಲೆಯ ಬಿಜೆಪಿಯ ಭಿನ್ನಮತ ಸ್ಫೋಟಗೊಂಡಿದ್ದು ನಡುರಸ್ತೆಯಲ್ಲಿಯೇ ಬಿಜೆಪಿ ನಾಯಕರು ಕಚ್ಚಾಡಿಕೊಂಡ ಘಟನೆ ನಡೆಯಿತು.
 
ಬಿಜೆಪಿಯ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಮತ್ತು ಸ್ಲಂ ಮೋರ್ಚಾ ರಾಜ್ಯ ಉಪಾಧ್ಯಕ್ಷ ಆರ್.ಮಾರುತೇಶ್ ನಡು ರಸ್ತೆಯಲ್ಲಿಯೇ ಕಚ್ಚಾಡಿಕೊಂಡು ಅಶಿಸ್ತು ಮೆರೆದಿದ್ದಾರೆ.
 
ಜಾಥಾಗೆ ಚಾಲನೆ ನೀಡಿದ ಬಳಿಕ ಬೆಂಬಲಿಗರು ಮಾರುತೇಶ್ ಪರ ಘೋಷಣೆಗಳನ್ನು ಕೂಗಿದ ಹಿನ್ನೆಲೆಯಲ್ಲಿ ಮಾಜಿ ಶಾಸಕ ದೊಡ್ಡನಗೌಡ ಗರಂ ಆಗಿದ್ದಾರೆ. ದೊಡ್ಡನಗೌಡ ಮತ್ತು ಮಾರುತೇಶ್ ನಡುವೆ ಮಾತಿನ ಚಕಮಕಿ ವಿಕೋಪಕ್ಕೆ ತೆರಳಿದಾಗ ಪರಸ್ಪರರು ಅಸಭ್ಯ ಭಾಷೆ ಪದ ಬಳಕೆ ಮಾಡಿಕೊಂಡ ಘಟನೆಯೂ ನಡೆಯಿತು.
 
ಜಿಲ್ಲಾ ಬಿಜೆಪಿಯಲ್ಲಿ ಮೊದಲಿನಿಂದಲೂ ಉಭಯ ನಾಯಕರ ಮಧ್ಯೆ ತಿಕ್ಕಾಟವಿದ್ದು, ಇದೀಗ ನಡುರಸ್ತೆಯಲ್ಲಿ ಬಹಿರಂಗವಾಗುವ ಮೂಲಕ ಭಿನ್ನಮತ ಬಯಲಿಗೆ ಬಂದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಭಗ್ನಪ್ರೇಮಿಯಿಂದ ಕಾಲೇಜು ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿತ