Select Your Language

Notifications

webdunia
webdunia
webdunia
webdunia

ದಕ್ಷಿಣ ಭಾರತೀಯರನ್ನು ಕರಿಯರೆಂದು ಜರಿದ ಬಿಜೆಪಿ ನಾಯಕರು: ರಮ್ಯಾ ಆರೋಪ

ದಕ್ಷಿಣ ಭಾರತೀಯರನ್ನು ಕರಿಯರೆಂದು ಜರಿದ ಬಿಜೆಪಿ ನಾಯಕರು: ರಮ್ಯಾ ಆರೋಪ
ನವದೆಹಲಿ , ಮಂಗಳವಾರ, 16 ಮೇ 2017 (14:49 IST)
ದಕ್ಷಿಣ ಭಾರತೀಯರನ್ನು ಕರಿಯರೆಂದು ಕರೆದು ಅಪಮಾನ ಮಾಡಲಾಗುತ್ತಿದೆ. ಬಿಜೆಪಿ ನಾಯಕರು ಭಾರತೀಯರ ಬಗ್ಗೆ ಅಪಮಾನಕಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮಾಜಿ ಸಂಸದೆ ರಮ್ಯಾ ಆರೋಪಿಸಿದ್ದಾರೆ.  
 
ಬರಪರಿಹಾರ ನೀಡುವಲ್ಲಿ ಕೇಂದ್ರ ಸರಕಾರ ತಾರತಮ್ಯ ಎಸಗಿದೆ. ಕೇಂದ್ರ ಸರಕಾರ ದಕ್ಷಿಣ ಭಾರತವನ್ನು ನಿರ್ಲಕ್ಷದಿಂದ ನೋಡುತ್ತಿದೆ. ತಮಿಳುನಾಡು ರೈತರು ಸಂಸತ್ತಿನ ಮುಂದೆ ಪ್ರತಿಭಟನೆ ನಡೆಸಿದರೂ ಕೇಂದ್ರ ಸರಕಾರ ಕ್ಯಾರೆ ಎನ್ನಲಿಲ್ಲ ಎಂದು ಗುಡುಗಿದರು. 
 
ಆಂಧ್ರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ನಡೆಸಿದ ಹೋರಾಟಕ್ಕೂ ಕೇಂದ್ರ ಕಿಮ್ಮತ್ತು ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 
 
ಕೇರಳ ರಾಜ್ಯಕ್ಕೂ ಕೇಂದ್ರ ಸರಕಾರ ಮಲತಾಯಿ ಧೋರಣೆ ತೋರುತ್ತಿದೆ. ಮೂರು ವರ್ಷದಲ್ಲಿ ಅಸಹಿಷ್ಣುತೆಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ನರೇಗಾ ವಿತರಣೆಯಲ್ಲೂ ಕೇಂದ್ರ ಸರಕಾರ ದಕ್ಷಿಣ ಭಾರತವನ್ನು ವಂಚಿಸಿದೆ ಎಂದು ಮಾಜಿ ಸಂಸದೆ ನಟಿ, ರಮ್ಯಾ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿಬಿಐ ದಾಳಿಯ ಬಗ್ಗೆ ಪ್ರತಿಕ್ರಿಯೆಗೆ ಪಿ.ಚಿದಂಬರಂ ನಕಾರ