Publish Date: Tue, 04 Apr 2017 (11:46 IST)
Updated Date: Tue, 04 Apr 2017 (11:49 IST)
ಸರಳ, ಸಜ್ಜನಿಕೆಗೆ ಹೆಸರಾದ ಬಿಜೆಪಿ ಮುಖಂಡ ಸುರೇಶ್ ಕುಮಾರ್ ಉಪಚುನಾವಣಾ ಪ್ರಚಾರ ಕಣದಲ್ಲೂ ತಮ್ಮ ಸರಳ ಜೀವನ ಶೈಲಿಯಿಂದ ಗಮನ ಸೆಳೆದಿದ್ದಾರೆ. ಎಲ್ಲ ನಾಯಕರು ಎಸಿ ಕೊಠಡಿಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದರೆ, ಸುರೇಶ್ ಕುಮಾರ್, ಬಿಜೆಪಿ ಕಾರ್ಯಕರ್ತರೊಬ್ಬರ ತೋಟದ ಮನೆಯ ದನದ ಕೊಟ್ಟಿಗೆಯಲ್ಲೇ ವಾಸ್ತವ್ಯ ಹೂಡಿದ್ದಾರೆ.
ತಮ್ಮ ಸಹಚರರ ಜೊತೆ ದನಗಳು ಕಟ್ಟಿರುವ ಶೆಡ್`ನಲ್ಲಿ ಉಳಿದಿರುವ ಸುರೇಶ್ ಕುಮಾರ್, ಪ್ರಚಾರ ಮುಗಿಸಿಕೊಂಡು ಬಂದು ದನಗಳು ಕಟ್ಟಿರುವ ಪಕ್ಕದ ಜಾಗದಲ್ಲಿಯೇ ಮಲಗುತ್ತಾರೆ. ಸುರೇಶ್ ಕುಮಾರ್ ಅವರ ಸರಳ ಜೀವನದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.