ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ BJP JDS ಮೈತ್ರಿ ಮಾತುಕತೆ ನಡೆಯುತ್ತಿದೆ. ಜೆಡಿಎಸ್ಗೆ ನಾಲ್ಕು ಸೀಟು ಬಿಟ್ಟು ಕೊಡಲು ಅಮಿತ್ ಶಾ ಹೇಳಿದ್ದಾಗಿ ಈಗಾಗಲೇ ಮಾಜಿ ಸಿಎಂ ಯಡಿಯೂರಪ್ಪ ಬಹಿರಂಗಪಡಿಸಿದ್ದಾರೆ. ಒಂದೊಮ್ಮೆ ಈ ಮೈತ್ರಿ ಮಾತುಕತೆ ಯಶಸ್ವಿಯಾದರೆ ಕರ್ನಾಟಕದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಂದೇ ಒಂದು ಸೀಟು ಗೆಲ್ಲದಂತೆ ಮಾಡಲು ಅನುಕೂಲವಾಗಲಿದೆ ಎಂದು ಲೆಕ್ಕಾಚಾರವಾಗಿದೆ.ಆದರೆ, ಜೆಡಿಎಸ್ ಕೇಳಿದಷ್ಟು ಸೀಟುಗಳನ್ನು ಬಿಟ್ಟುಕೊಡಲು ಬಿಜೆಪಿ ರಾಜ್ಯ ನಾಯಕರು ಒಲವು ಹೊಂದಿಲ್ಲ ಎಂದು ತಿಳಿದುಬಂದಿದೆ. ಕನಿಷ್ಠ 2 ಹಾಗೂ ಗರಿಷ್ಠ 3 ಸೀಟುಗಳನ್ನು ಮಾತ್ರ ಬಿಟ್ಟು ಕೊಡಲು ಒಲವು ಹೊಂದಿದ್ದಾರೆ. ಆದರೆ, ಮೈತ್ರಿ ಯಶಸ್ವಿಯಾಗಬೇಕಾದರೆ ಸೀಟುಗಳ ಹಂಚಿಕೆಯಲ್ಲಿ ತೃಪ್ತಿ ತರಬೇಕು. ಒಂದೊಮ್ಮೆ ಹೆಚ್ಚಿನ ಸ್ಥಾನಗಳಿಗಾಗಿ ಜೆಡಿಎಸ್ ಬೇಡಿಕೆ ಇಟ್ಟರೆ ಏನು ಮಾಡೋದು ಎಂಬ ಚಿಂತೆ ಬಿಜೆಪಿ ನಾಯಕರನ್ನು ಕಾಡ್ತಿದೆ ಎಂಬುದು ಮೆಲ್ನೋಟಕ್ಕೆ ಕಂಡು ನಂದಿದೆ.