Select Your Language

Notifications

webdunia
webdunia
webdunia
webdunia

ಬಿಜೆಪಿಗೆ ಅಲ್ಪಸಂಖ್ಯಾತರು, ದಲಿತರನ್ನು ಮಟ್ಟಹಾಕುವುದೇ ಟಾರ್ಗೆಟ್: ಸಿಎಂ ಸಿದ್ದರಾಮಯ್ಯ

ಬಿಜೆಪಿಗೆ ಅಲ್ಪಸಂಖ್ಯಾತರು, ದಲಿತರನ್ನು ಮಟ್ಟಹಾಕುವುದೇ ಟಾರ್ಗೆಟ್: ಸಿಎಂ ಸಿದ್ದರಾಮಯ್ಯ
ಮೈಸೂರು , ಶನಿವಾರ, 23 ಜುಲೈ 2016 (15:02 IST)
ದೇಶದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಬಿಜೆಪಿಯವರದ್ದು ಎರಡು ಹಿಡನ್ ಅಜೆಂಡಾಗಳಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
 
ಒಂದನೇ ಹಿಡನ್ ಅಜೆಂಡಾ ಎಂದರೆ ಬಹಿರಂಗವಾಗಿ ಅಲ್ಪಸಂಖ್ಯಾತರನ್ನು ಮಟ್ಟಹಾಕುವುದು ಎರಡನೇ ಹಿಡನ್ ಅಜೆಂಡಾ ಅಂದರೆ, ದಲಿತರನ್ನು ಒಳಗಿಂದೊಳಗೆ ಮಟ್ಟಹಾಕುವುದು. ಎರಡು ಟಾರ್ಗೆಟ್‌ಗಳನ್ನು ಇಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. 
 
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋ ಮಾಂಸ ಆರೋಪದಡಿ ಗುಜರಾತ್ ದಲಿತ ಯುವಕರ ಮೇಲಿನ ಹಲ್ಲೆಯ ಘಟನೆ ಅಮಾನವೀಯ. ಮೋದಿ ಪ್ರಧಾನಿಯಾದ ಬಳಿಕ ಅಲ್ಪ ಸಂಖ್ಯಾತರ ಮೇಲೆ ಬಹಿರಂಗವಾಗಿ ದೌರ್ಜನ್ಯ ನಡೆಯುತ್ತಿದೆ ಎಂದು ಕೇಂದ್ರ ಸರಕಾರದ ವಿರುದ್ಧ ಗುಡುಗಿದರು.
 
ಗುಜರಾತ್ ದಲಿತ ಯುವಕರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ದಲಿತ ಯುವಕರು ಗೋವ ನ್ನು ಕೊಂದಿಲ್ಲ. ಬದಲಾಗಿ ಸತ್ತಿರುವ ಗೋ ಚರ್ಮಯನ್ನು ಮಾರಾಟ ಮಾಡಿ ತಮ್ಮ ಬದುಕು ಸಾಗಿಸುತ್ತಿರುವವರು ಅವರ ಮೇಲಿನ ಹಲ್ಲೆ ಖಂಡನೀಯ ಎಂದು ತಿಳಿಸಿದರು.
 
ಬಹಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರನ್ನು ವೇಶ್ಯೆಗೆ ಹೊಲಿಸಿರುವ ಬಿಜೆಪಿ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ಅವರ ಹೇಳಿಕೆಯನ್ನು ಖಂಡಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕುಮಾರಣ್ಣಾ ನಮ್ಮ ನಾಯಕ ಎನ್ನದೆ ಇನ್ನೇನು ಹೇಳಲಾಗುತ್ತೆ: ದೇವೇಗೌಡ ಲೇವಡಿ