Daily Horoscope

Select Your Language

Notifications

webdunia
webdunia
webdunia
webdunia

ಜೆಡಿಎಸ್ ಪಾದಯಾತ್ರೆ ದಿನಾಂಕದ ಬಗ್ಗೆ ಬಿಜೆಪಿಗೆ ಯಾವುದೇ ಅಪಸ್ವವಿಲ್ಲ: ಎನ್.ರವಿಕುಮಾರ್

BJP Leader N Ravikumar
Photo Credit X
ಬೆಂಗಳೂರು: ಬಿಡದಿ ಟೌನ್ ಶಿಪ್ ಯೋಜನೆಯನ್ನು ಕೈಬಿಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಲು ಬಿಡದಿಯಿಂದ ಬೆಂಗಳೂರುವರೆಗೆ ಬೃಹತ್ ಪಾದಯಾತ್ರೆ ನಡೆಸಲು ಬಿಜೆಪಿ ನಿರ್ಧರಿಸಿದೆ. ಎನ್‍ಡಿಎ ಮಿತ್ರ ಪಕ್ಷವಾಗಿರುವ ಜೆಡಿಎಸ್ ಜುಲೈ 30, 31 ಹಾಗೂ ಆಗಸ್ಟ್ 1 ರಂದು ಪಾದಯಾತ್ರೆ ಎಂಬುದಾಗಿ ದಿನಾಂಕ ಘೋಷಣೆ ಮಾಡಿದೆ. ಈ ದಿನಾಂಕದ ಬಗ್ಗೆ ಬಿಜೆಪಿಗೆ ಯಾವುದೇ ತರಕಾರು ಇಲ್ಲ ಎಂದು ವಿಧಾನ ಪರಿಷತ್ತಿನ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ. 

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ದಿನಾಂಕದ ಬಗ್ಗೆ ಸುದ್ದಿವಾಹಿನಿಗಳಲ್ಲಿ ಚರ್ಚೆಯಾಗುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್ ಬೇರೆ ಬೇರೆ ಪಾದಯಾತ್ರೆ ಮಾಡುತ್ತವೆಯೇ ಇಲ್ಲವೇ ಒಟ್ಟಿಗೆ ಮಾಡುತ್ತಾರೋ ಎಂದು ಚರ್ಚೆ ಆಗುತ್ತಿದೆ. ನಾವು ಎನ್‍ಡಿಎ ಪಕ್ಷವಾಗಿರುವ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ಬೇಡಿಕೆ ಒಂದೇ ಇದೆ. ದಿನಾಂಕದ ಬಗ್ಗೆ ಬಿಜೆಪಿಗೆ ಯಾವುದೇ ಅಪಸ್ವರ ಇಲ್ಲ ಎಂದರು. 

ಎರಡೂ ಪಕ್ಷಗಳ ಆಗ್ರಹ ಬಿಡದಿ ಟೌನ್ ಶಿಪ್ ಅನ್ನು ರಾಜ್ಯ ಸರ್ಕಾರ ಕೈಬಿಡಬೇಕು ಎಂಬುದೇ ಆಗಿದೆ. ಪಾದಯಾತ್ರೆ ದಿನಾಂಕದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಒಮ್ಮೆ ಜೆಡಿಎಸ್ ಮುಖಂಡರ ಜೊತೆ ಮಾತನಾಡಲಿದ್ದಾರೆ. ದಿನಾಂಕದ ಬಗ್ಗೆ ಯಾವುದೇ ವಿವಾದ ಮಾಡುವುದಿಲ್ಲ. ಪಾದಯಾತ್ರೆ ಬಗ್ಗೆ ಎರಡೂ ಪಕ್ಷಗಳು ಒಮ್ಮತದ ನಿರ್ಧಾರ ಪ್ರಕಟಿಸಲಿವೆ ಎಂದು ಹೇಳಿದರು. ಕೂಡಲೇ ಬಿಡದಿ ಟೌನ್ ಶಿಫ್ ಅನ್ನು ಕೈ ಬಿಡಬೇಕು ಎಂದು ನಾವು ಆಗ್ರಹಿಸಿದ್ದೇವೆ. ನಿನ್ನೆ ಬೃಹತ್ ಪ್ರತಿಭಟನೆ ನಡೆಸಿದ್ದೇವೆ. ಸಾವಿರಾರು ರೈತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು. 

ದ್ವಿಮುಖ ನೀತಿ ಸರಿಯಲ್ಲ...
ಬಿಡದಿ ಟೌನ್‍ಶಿಪ್‍ಗೆ ರೈತರ ಜಮೀನನ್ನು ಒತ್ತಾಯವಾಗಿ ಪಡೆಯುವುದಿಲ್ಲ ಎಂದು ಹೇಳುವ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಭೂಸ್ವಾಧೀನಕ್ಕೆ ಎರಡನೇ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಒತ್ತಾಯವಾಗಿ ಭೂಮಿ ಪಡೆಯುವುದಿಲ್ಲ ಎಂದ ಮೇಲೆ ಯಾಕೆ ಅಧಿಸೂಚನೆ ಹೊರಡಿಸಬೇಕು. ಇಂತಹ ದ್ವಿಮುಖ ನೀತಿಯನ್ನು ಶಿವಕುಮಾರ್ ಅವರು ಬಿಡಬೇಕು ಎಂದು ಆಗ್ರಹಿಸಿದರು. 
ರೈತರ ಫಲವತ್ತಾದ ಜಮೀನನ್ನು ಟೌನ್ ಶಿಪ್‍ಗೆ ಪಡೆಯಬಾರದು. ಅರ್ಧ ಎಕರೆ ಜಮೀನು ಹೊಂದಿರುವ ರೈತರಿಂದಲೂ ಟೌನ್‍ಶಿಪ್‍ಗೆ ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಸರ್ಕಾರದ ವಶದಲ್ಲಿರುವ ಜಮೀನು ಬೇಕಾದರೆ ಟೌನ್‍ಶಿಪ್‍ಗೆ ಪಡೆಯಲಿ. ಅದು ಬಿಟ್ಟು ವಾಣಿಜ್ಯ ಬೆಳೆ, ತೋಟಗಾರಿಕೆ ಬೆಳೆ ಬೆಳೆಯುವ ಫಲವತ್ತಾದ ಜಮೀನನ್ನು ಏಕೆ ಒತ್ತಾಯವಾಗಿ ಪಡೆಯಬೇಕು ಎಂದು ಪ್ರಶ್ನಿಸಿದರು. ಉಳುವ, ಬೆಳೆಯುವ ಭೂಮಿಯನ್ನು ನಾಶ ಮಾಡಿ ಟೌನ್ ಶಿಪ್ ಮಾಡುವುದು ರೈತರ ಸಮಾಧಿ ಮೇಲೆ ನಗರ ನಿರ್ಮಾಣ ಮಾಡಿದಂತೆ. ಇದಕ್ಕೆ ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ ಎಂದರು.

ಮಾತನಾಡಿ ಸಣ್ಣ ಸ್ಪಷ್ಟನೆ..
ಪಾದಯಾತ್ರೆಯಲ್ಲಿ ಭಾಗವಹಿಸವ ಕುರಿತು ಸಣ್ಣ ಸ್ಪಷ್ಟನೆಯನ್ನು ನಮ್ಮ ನಾಯಕರು ಜೆಡಿಎಸ್‍ನರ ಜೊತೆ ಮಾತನಾಡಿ ಪ್ರಕಟಿಸುತ್ತೇವೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.ಈ ವಿಚಾರದಲ್ಲಿ ವಿವಾದ ಇಲ್ಲ; ಭಾಗವಹಿಸುವ ಕುರಿತು ನಾವಿನ್ನೂ ತೀರ್ಮಾನ ಮಾಡಿಲ್ಲ; ಅಧ್ಯಕ್ಷರು ಮತ್ತು ಪ್ರತಿಪಕ್ಷದ ನಾಯಕರು ಅವರ ಜೊತೆ ಮಾತನಾಡಿದ್ದಾರಾ ಎಂಬುದು ತಿಳಿದಿಲ್ಲ. ಹಾಗಾಗಿ ಮಾತನಾಡಿ ತಿಳಿಸುತ್ತೇವೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.


ಹೋರಾಟದ ವಿಚಾರದಲ್ಲಿ ಒಂದೇ ಧ್ವನಿ..
ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಹೋರಾಟದ ವಿಚಾರದಲ್ಲಿ ಎನ್‍ಡಿಎಯದು ಒಂದೇ ಧ್ವನಿ; ಗುರಿ, ಹೋರಾಟ, ಬೇಡಿಕೆಯೂ ಒಂದೇ ಆಗಿದೆ. ಆ ಯೋಜನೆ ಕೈಬಿಡಬೇಕು ಎಂಬ ಒತ್ತಾಯ ನಮ್ಮದು ಎಂದರು. ಈ ಸರಕಾರವನ್ನು ಮನೆಗೆ ಕಳಿಸುವುದೇ ನಮ್ಮ ಗುರಿ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ಸಿನಲ್ಲಿ ಸಮನ್ವಯತೆ ಇಲ್ಲ..
ನಮ್ಮ ಅಧ್ಯಕ್ಷರು ಜೆಡಿಎಸ್‍ನವರಿಗೆ ಫೋನ್ ಮಾಡಿದ್ದಾರೆ; ಆಗ ಅವರು ಸಿಕ್ಕಿಲ್ಲ. ಇದೀಗ ಮಾತನಾಡಿ ದಿನಾಂಕದ ಬಗ್ಗೆ ಸ್ಪಷ್ಟಪಡಿಸಲಿದ್ದೇವೆ ಎಂದು ಪ್ರಶ್ನೆಗೆ ಉತ್ತರಿಸಿದರು. ಇಲ್ಲಿಯೂ ಸಮನ್ವಯತೆ ಇಲ್ಲದೇ ಹೋಯಿತೇ ಎಂಬ ಪ್ರಶ್ನೆಗೆ ಉತ್ತರ ನೀಡಿದ ಅವರು, ಕಾಂಗ್ರೆಸ್ಸಿನಲ್ಲಿ ಸಮನ್ವಯತೆ ಇಲ್ಲ. ಸಚಿವ ಸಂಪುಟ ರಚನೆ ಮಾಡಲು ಪ್ರಾರಂಭಿಸಿ ಎಷ್ಟು ದಿನಗಳಾಗಿವೆ?. ಒಬ್ಬರಾದರೂ ರೈತರ ಗೋಳನ್ನು ನೋಡಲು ಹೋಗಿದ್ದಾರಾ? ರೈತರ ಹೊಲ ನೋಡಲು, ಅಧ್ಯಯನ ಮಾಡಲು ಹೋಗಿದ್ದಾರಾ? ಎಂದು ಕೇಳಿದರು.
ದನಕರುಗಳಿಗೆ ಕುಡಿಯಲು ನೀರಿಲ್ಲ; ಬಿತ್ತನೆ ಮಾಡಿ ಬೆಳೆ ಒಣಗಿ ಹೋಗಿದೆ. ರೈತರನ್ನು ನೋಡಲು ಹೋಗಿದ್ದಾರಾ? ತಾಳಮೇಳ ಇಲ್ಲದ ಸರಕಾರ ಇವರದು. ‘ಎತ್ತು ಏರಿಗೆ, ಕೋಣ ನೀರಿಗೆ’ ಎಂಬಂಥ ಸರಕಾರ ಕಾಂಗ್ರೆಸ್ಸಿನದು ಎಂದು ಟೀಕಿಸಿದರು. ನಮ್ಮ ಪಾದಯಾತ್ರೆ ಒಂದೇ; ಗುರಿ ಒಂದೇ, ರೈತವಿರೋಧಿ ಬಿಡದಿ ಯೋಜನೆ ಕೈಬಿಡಬೇಕೆಂಬ ಒತ್ತಾಯ ನಮ್ಮದು ಎಂದು ತಿಳಿಸಿದರು. ಬರಗಾಲದ ಸಂಬಂಧ ನಿಮ್ಮ ಮೊದಲನೇ ಹಂತದ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸೋನಮ್ ವಾಂಗ್ಚುಕ್ ಉಪವಾಸ ಮುಂದುವರೆಸಿದರೆ ಆರೋಗ್ಯಕ್ಕೆ ಏನು ಅಪಾಯ ಎಂದ ವೈದ್ಯರು