ಕ್ಯಾಮೆರಾ ಕಂಡರೆ ಬಿಜೆಪಿ ಸರಕಾರ ನಡುಗೋದ್ಯಾಕೆ?

Webdunia
ಶುಕ್ರವಾರ, 11 ಅಕ್ಟೋಬರ್ 2019 (18:23 IST)
ಕ್ಯಾಮೆರಾ ಕಂಡರೆ ಬಿಜೆಪಿಗರಿಗೆ ಏಕೆ ನಡುಕ? ಹೀಗೊಂದು ಪ್ರಶ್ನೆ ಬಲವಾಗಿ ಕೇಳಿಬರಲಾರಂಭಿಸಿದೆ.

ವಿಧಾನಸಭೆ ಕಲಾಪದಲ್ಲಿ ಖಾಸಗಿ ಮಾಧ್ಯಮಗಳನ್ನು ನಿಷೇಧ ಮಾಡಿರೋದನ್ನು ಖಂಡಿಸಿ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ವಿಧಾನ ಸಭೆ ಕಲಾಪದಲ್ಲಿ ಖಾಸಗಿ ಮಾಧ್ಯಮಗಳ ಕ್ಯಾಮರಾಗಳನ್ನು ನಿಷೇಧ ಮಾಡಿರುವುದನ್ನು ಖಂಡಿಸಿ, ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿಭಟನೆ ಮಾಡಿ ತಹಸೀಲ್ದಾರ್ ಮೂಲಕ ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ಇದಕ್ಕೂ ಮುನ್ನ ಪತ್ರಕರ್ತರ  ಭವನದಿಂದ ತಹಸೀಲ್ದಾರ್ ರ ಕಚೇರಿವರೆಗೆ ರ್ಯಾಲಿ ನಡೆಸಲಾಯಿತು. ಈ ವೇಳೆ ಕಲಾಪದಲ್ಲಿ ಖಾಸಗಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿರುವುದನ್ನು ಖಂಡಿಸಿ ರಾಜ್ಯ ಸರ್ಕಾರ ಮತ್ತು ಕಲಾಪದ ಸಭಾಧ್ಯಕ್ಷರ ವಿರುದ್ಧ ಪ್ರತಿಭಟನಾ ನಿರತ ಪತ್ರಕರ್ತರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮದ ಮೇಲೆ ಸಭಾಧ್ಯಕ್ಷರು ತೆಗೆದುಕೊಂಡ ನಿರ್ಧಾರ ಖಂಡನೀಯ. ಈ ಮೂಲಕ ಕಲಾಪಗಳನ್ನು ಪಾರದರ್ಶಕತೆಯಿಂದ ದೂರ ಮಾಡುವ ಸಂಚು ರೂಪಿಸಲಾಗಿದೆ. ಈ ಹಿಂದೆ ಕಲಾಪಗಳಲ್ಲಿ ಸಚಿವರು ತೋರಿದ ಘಟನೆಗಳನ್ನು ಈ ಕಾಲದಲ್ಲಿ ನೆನಪಿಸಿಕೊಳ್ಳುವುದು ಸೂಕ್ತವಾಗಿದೆ.

ಅಲ್ಲದೇ ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವ ಮೂಲಕ ಸರ್ಕಾರ ಮತ್ತು ಜನರ ನಡುವಿನ ಸೇತುವೆಯನ್ನು ಹಾಳು ಮಾಡುವುದೇ ಆಗಿದೆ. ಈ ಕೂಡಲೇ ರಾಜ್ಯ ಸರ್ಕಾರ ಮತ್ತು ಸಭಾಧ್ಯಕ್ಷರು ಖಾಸಗಿ ಮಾಧ್ಯಮಗಳ ಮೇಲೆ ಹೇರಿರುವ ನಿರ್ಬಂಧವನ್ನು ವಾಪಾಸ್ ಪಡೆದು ಮೊದಲಿನಂತೆ ಕಲಾಪಗಳ ದೃಶ್ಯಗಳನ್ನು ಸೆರೆ ಹಿಡಿಯಲು ಅವಕಾಶವನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಿಯಾಂಕಾ ಗಾಂಧಿ ಪ್ರಧಾನಿಯಾಗಿದ್ದಿದ್ದರೆ ಬಾಂಗ್ಲಾದೇಶಕ್ಕೆ ತಕ್ಕ ಪಾಠ ಕಲಿಸುತ್ತಿದ್ರು: ಕೈ ಸಂಸದನ ಹೊಗಳಿಕೆ

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ದಿನಗಣನೆ: ಬಹುಭಾಷಾ ತಾರೆ ಪ್ರಕಾಶ್‌ ರಾಜ್‌ಗೆ ವಿಶೇಷ ಗೌರವ

ಚಿರತೆ ಸೆರೆಗೆ ಇಟ್ಟಿದ ಬೋನಿನಲ್ಲಿ ಲಾಕ್‌ ಆದ ರೈತ: ಮೂರು ಗಂಟೆ ಬೊಬ್ಬೆ ಹೊಡೆದ ಬಳಿಕ ನಿಟ್ಟುಸಿರು

ಧ್ವೇಷ ಭಾಷಣ ಮಸೂದೆ ಅಂಗೀಕರಿಸಬೇಡಿ ಎಂದು ರಾಜ್ಯಪಾಲರಿಗೆ ಬಿಜೆಪಿ ಮನವಿ

ನಮ್ಮಲ್ಲಿ ಗೊಂದಲ ಇಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳೋದು ನೋಡಿದ್ರೇ ಡೌಟ್: ಸಿಟಿ ರವಿ

ಮುಂದಿನ ಸುದ್ದಿ
Show comments