Select Your Language

Notifications

webdunia
webdunia
webdunia
webdunia

ಬಿಜೆಪಿ ಸರ್ಕಾರ ಇನ್ನು 50 ದಿನ ಮಾತ್ರ-ಡಿ.ಕೆ. ಶಿವಕುಮಾರ್

ಬಿಜೆಪಿ ಸರ್ಕಾರ ಇನ್ನು 50 ದಿನ ಮಾತ್ರ-ಡಿ.ಕೆ. ಶಿವಕುಮಾರ್
bangalore , ಶುಕ್ರವಾರ, 3 ಫೆಬ್ರವರಿ 2023 (15:05 IST)
ಪ್ರಜಾಧ್ವನಿ ಯಾತ್ರೆಯನ್ನು ವಿಧಾನಸಭಾ ಕ್ಷೇತ್ರವಾರು ಮಾಡ್ತಿದ್ದೇವೆ.ರಾಜ್ಯದ ಎಲ್ಲಾ ಜಿಲ್ಲೆಗಳನ್ನ ಮುಗಿಸಿದ್ದೇವೆ.ನಾವು ಏನು ನೀರೀಕ್ಷೆ ಮಾಡಿದ್ವೋ ಅದರ ಎರಡರಷ್ಟು ಜನ ಸೇರಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ
 
ಜನರ ಸಮಸ್ಯೆ ಇತ್ತಿಚೀಗೆ ದುಪ್ಪಟ್ಟಾಗಿದೆ .ಹಾಸನ ಮಂಡ್ಯದಲ್ಲಿ ಒಬ್ಬರೇ ಒಬ್ಬರು ನಮ್ಮ ಶಾಸಕರಿಲ್ಲ ಆದರೂ ಅಲ್ಲಿ ಜನ ಸೇರಿದ್ದು ನೋಡಿ ನನಗೆ ಅಶ್ಚರ್ಯವಾಗಿದೆ .ಶಾಸಕರು ಇಲ್ಲದೇ ಇರೋ ಜಿಲ್ಲೆಯಲ್ಲಿ ಇಷ್ಟು ಜನ ಸೇರಿದ್ದೂ ದಾಖಲೆ.ಬಸವಣ್ಣನವರ ಕರ್ಮ ಭೂಮಿಯಿಂದ ಸಿದ್ಧರಾಮಯ್ಯನವರು ಹೊರಡುತ್ತಿದ್ದಾರೆ .ಬರೆದಿಟ್ಟು ಕೊಳ್ಳಿ
ಬಿಜೆಪಿ ಸರ್ಕಾರ ಇನ್ನು 50 ದಿನ ಮಾತ್ರ.ನಾನು ಎರಡು ಬಾರಿ ಸರ್ವೇ ಮಾಡಿದ್ದೇನೆ 160 ಸೀಟು ನಮಗೆ ಸಿಗುತ್ತೆ .೧೩೬ ಸೀಟು ಬಂದೇ ಬರುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
 
ಪ್ರಣಾಳಿಕೆ ವಿಚಾರದಲ್ಲಿ ಪರಮೇಶ್ವರ್ ಅಸಮಾಧಾನ ವಿಚಾರವಾಗಿಯೂ ಪ್ರತಿಕ್ರಿಯಿಸಿದ್ದು,ಪರಮೇಶ್ವರ್ ನಮ್ಮ ಪಕ್ಷದ ಆಸ್ತಿ.ಅವರು ಬಹಳ ಸುದೀರ್ಘವಾಗಿ ಪಕ್ಷ ಕಟ್ಟಿದವರು.ಬೆಂಗಳೂರಿಗೆ ಒಂದು ವಿಶೇಷವಾದ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ತರಬೇಕಿದೆ.ಬೆಂಗಳೂರು ಟ್ರಾಫಿಕ್ ಮ್ಯಾನ್ಮೆಂಜ್ಮೆಂಟ್ ಗೆ ಸಂಬಂಧಿಸಿ ಸುರ್ಜೆವಾಲಾ ಚರ್ಚೆ ಮಾಡಿದ್ದಾರೆ.ಪರಮೇಶ್ವರ್ ನೇತೃತ್ವದಲ್ಲಿ ಒಂದು ತಂಡ ಸಿಂಗಾಪುರಕ್ಕೆ ಹೋಗಲಿದೆ.ಸಿಂಗಾಪುರಕ್ಕೆ ಒಂದು ಟೀಂ ಕಳಿಸಲು ನಿರ್ಧಾರ ಮಾಡಿದ್ದೇವೆ.ಅದರ ಬಗ್ಗೆ ಪರಮೇಶ್ವರ್ ಸುರ್ಜೆವಾಲಾ ಚರ್ಚೆ ಮಾಡಿದ್ದಾರೆ.ಬೆಂಗಳೂರಿಗೆ ಬಂದಿರೋ ಕಳಂಕ ತಪ್ಪಿಸುವ ನಿಟ್ಟಿನಲ್ಲಿ ಚರ್ಚೆಯಾಗಿದೆ
 
ಸರ್ಕಾರ ಭ್ರಷ್ಟಚಾರದಲ್ಲೇ ಮುಳುಗಿ ಹೋಗಿದೆ .ಈ ಯಾತ್ರೆ ಜನರ ಸಮಸ್ಯೆಗಳನ್ನ ತಿಳಿಯಲು ಸುಳ್ಳು ಅಶ್ವಾಸನೆ ಕೊಡುವುದಿಲ್ಲ ರಮೇಶ್ ಜಾರಕಿಹೊಳಿ ಆರೋಪಗಳೆಲ್ಲ ರಬ್ಬಿಶ್ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಗಡಿಭಾಗದ ಜನರು ಸಾಮರಸ್ಯದಿಂದ ಬದುಕುವಂತಾಗಬೇಕು : ಸಿಎಂ