Select Your Language

Notifications

webdunia
webdunia
webdunia
webdunia

ರಾಷ್ಟ್ರಧ್ವಜ ಹಾರಾಟ ಮಾಡುವ ಕಂಬದಲ್ಲಿ ಬಿಜೆಪಿ ಬಾವುಟ?

ರಾಷ್ಟ್ರಧ್ವಜ ಹಾರಾಟ ಮಾಡುವ ಕಂಬದಲ್ಲಿ ಬಿಜೆಪಿ ಬಾವುಟ?
ವಿಜಯಪುರ , ಭಾನುವಾರ, 16 ಜುಲೈ 2017 (12:22 IST)
ಶಾಲೆಯಲ್ಲಿ ರಾಷ್ಟ್ರಧ್ವಜ ಹಾರಾಟ ಮಾಡುವ ಕಂಬದಲ್ಲಿ ಬಿಜೆಪಿ ಪಕ್ಷದ ಬಾವುಟ ಹಾರಿಸಿರುವುದು ವಿವಾದಕ್ಕೆ ಕಾರಣವಾಗಿದೆ.
 
ನಗರದ ಶಾಲೆಯೊಂದರಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಭಾಗಿಯಾಗಿದ್ದರು. ಶಾಲೆಯಲ್ಲಿ ರಾಷ್ಟ್ರಧ್ವಜ ಹಾರಿಸುವ ಕಂಬದಲ್ಲಿ ಬಿಜೆಪಿ ಪಕ್ಷದ ಬಾವುಟ ಹಾರಿಸಿರುವುದು ಕಂಡು ಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
 
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಬೆಳ್ಳುಬ್ಬಿ, ಬಿಜೆಪಿ ಕಾರ್ಯಕ್ರಮ ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತೇ ಹೊರತು ಶಾಲೆಯಲ್ಲಲ್ಲ. ಇದೊಂದು ಯಾವುದೋ ಕಿಡಿಗೇಡಿಗಳ ಕೃತ್ಯ ಎಂದು ತಳ್ಳಿಹಾಕಿದ್ದಾರೆ.
 
ಬಿಜೆಪಿ ಪಕ್ಷಕ್ಕೆ ಕೆಟ್ಟ ಹೆಸರು ತರಬೇಕು ಎನ್ನುವ ಉದ್ದೇಶದಿಂದ ಕೆಲವರು ಷಡ್ಯಂತ್ರ ರೂಪಿಸಿ ಇಂತಹ ದುಷ್ಕ್ರತ್ಯ ಎಸಗಿರಬಹುದು ಎಂದು ಮಾಜಿ ಸಚಿವ ಕೆ.ಎಸ್.ಬೆಳ್ಳುಬ್ಬಿ ತಿಳಿಸಿದ್ದಾರೆ.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನರಗುಂದದಲ್ಲಿ ಮಾಡು ಇಲ್ಲವೇ ಮಡಿ ರೈತರ ಹೋರಾಟ