Select Your Language

Notifications

webdunia
webdunia
webdunia
webdunia

ಬಿಜೆಪಿ ಅಭ್ಯರ್ಥಿ ರೌಡಿ ಶೀಟರ್

ಬಿಜೆಪಿ ಅಭ್ಯರ್ಥಿ ರೌಡಿ ಶೀಟರ್
ಕೋಲಾರ , ಮಂಗಳವಾರ, 26 ಮಾರ್ಚ್ 2019 (14:57 IST)
ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿ ಸ್ವಾಮಿಗಿಂತ ಪತ್ನಿಯೇ ಶ್ರೀಮಂತೆಯಾಗಿದ್ದಾರೆ.
ವೃತ್ತಿಯಲ್ಲಿ ಕೃಷಿಕರಾಗಿರುವ ಮುನಿಸ್ವಾಮಿ ಪ್ರವೃತ್ತಿಯಲ್ಲಿ ಬಿಬಿಎಂಪಿ ಕಾರ್ಪೋರೇಟರ್ ಆಗಿದ್ದಾರೆ.

ಮುನಿಸ್ವಾಮಿ ಬಳಿ 64.20 ಲಕ್ಷ ಮೌಲ್ಯದ ಚರಾಸ್ತಿ ಇದೆ. ಪತ್ನಿ ಎಂ.ಶೈಲಜಾ ಅವರು 1.03 ಕೋಟಿ ಮತ್ತು ಮಕ್ಕಳ ಬಳಿ 15.92 ಲಕ್ಷ ಮೌಲ್ಯದ ಚರಾಸ್ತಿ ಇದೆ.

ಮುನಿಸ್ವಾಮಿ ಬಳಿ 8.60 ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು ಪತ್ನಿ ಬಳಿ 7.01 ಕೋಟಿ ಬೆಲೆ ಬಾಳುವ ಸ್ಥಿರಾಸ್ತಿ ಇದೆ. ಮುನಿಸ್ವಾಮಿ ಪತ್ನಿ ಶೈಲಜಾ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ 75 ಲಕ್ಷ ಹೂಡಿಕೆ ಮಾಡಿದ್ದಾರೆ. ಮುನಿಸ್ವಾಮಿ 75 ಲಕ್ಷ ಮತ್ತು ಶೈಲಜಾ 1.23 ಕೋಟಿ ಸಾಲ ಮಾಡಿಕೊಂಡಿದ್ದಾರೆ. ಮುನಿಸ್ವಾಮಿ 15 ಲಕ್ಷ, ಪತ್ನಿ ಎಂ.ಶೈಲಜಾ 9 ಲಕ್ಷ, ಮಕ್ಕಳಾದ ಎಂ.ವೈಷ್ಣವಿ ಮತ್ತು ಎಂ.ಹರ್ಷಿತಾ ಬಳಿ 1.60 ಲಕ್ಷ ನಗದು ಇದೆ.

ಮುನಿಸ್ವಾಮಿ ಕುಟುಂಬದವರು ಮುನಿಸ್ವಾಮಿ ವಿವಿಧ ಬ್ಯಾಂಕ್ ಗಳಲ್ಲಿ, ಆರೋಗ್ಯ ವಿಮೆಯಲ್ಲಿ, ಅಂಚೆ ಕಚೇರಿಯಲ್ಲಿ ಲಕ್ಷಾಂತರ ರುಪಾಯಿ ಠೇವಣಿ ಇಟ್ಟಿದ್ದಾರೆ. ಮುನಿಸ್ವಾಮಿ, ಅವರ ಪತ್ನಿಯು ಜಮೀನು ಖರೀದಿಗಾಗಿ 15.10 ಲಕ್ಷ ಮುಂಗಡ ಹಣ ಕೊಟ್ಟಿದ್ದಾರೆ.
ಮುನಿಸ್ವಾಮಿ ಬಳಿ 9 ಲಕ್ಷದ ಕಾರು ಮತ್ತು 70 ಸಾವಿರ ಮೌಲ್ಯದ ಬೈಕ್‌, ಪತ್ನಿ ಹೆಸರಿನಲ್ಲಿ 52 ಲಕ್ಷ ಬೆಲೆ ಬಾಳುವ 2 ಕಾರು, 5 ಲಕ್ಷದ ಎರಡು ಟ್ರ್ಯಾಕ್ಟರ್‌ ಹಾಗೂ 60 ಸಾವಿರ ಮೌಲ್ಯದ ಬೈಕ್‌ ಇದೆ. ಮುನಿಸ್ವಾಮಿ ಬಳಿ 18 ಲಕ್ಷ ಬೆಲೆ ಬಾಳುವ 600 ಗ್ರಾಂ ಚಿನ್ನಾಭರಣ ಮತ್ತು 1.90 ಲಕ್ಷ ಮೌಲ್ಯದ 4 ಕೆ.ಜಿ ಬೆಳ್ಳಿ ಆಭರಣಗಳಿವೆ. 

ಪತ್ನಿ ಶೈಲಜಾ  ಬಳಿ 27 ಲಕ್ಷ ಮೌಲ್ಯದ 900 ಗ್ರಾಂ ಚಿನ್ನಾಭರಣ ಹಾಗೂ 2.85 ಲಕ್ಷ ಬೆಲೆ ಬಾಳುವ 6 ಕೆ.ಜಿ ಬೆಳ್ಳಿ ಆಭರಣಗಳಿವೆ.

ಮಕ್ಕಳ ಬಳಿ 9 ಲಕ್ಷ ಮೌಲ್ಯದ 300 ಗ್ರಾಂ ಚಿನ್ನಾಭರಣ, 5 ಲಕ್ಷ ಬೆಲೆ ಬಾಳುವ 250 ಗ್ರಾಂ ವಜ್ರಾಭರಣಗಳಿವೆ.
ಮುನಿಸ್ವಾಮಿ ಮೇಲೆ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಅಟ್ರಾಸಿಟಿ ಮತ್ತು ರೌಡಿ ಶೀಟರ್ ಪ್ರಕರಣಗಳಿವೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೆ.ಎಚ್.ಮುನಿಯಪ್ಪ ಮೇಲೆ ಅಟ್ರಾಸಿಟಿ ಕೇಸ್