Publish Date: Sat, 14 Oct 2023 (08:50 IST)
Updated Date: Sat, 14 Oct 2023 (08:57 IST)
ಬೆಂಗಳೂರು: ಗುತ್ತಿಗೆದಾರರ ಮನೆ ಮೇಲೆ ನಡೆದ ಐಟಿ ದಾಳಿ ಸಂದರ್ಭದಲ್ಲಿ ಪತ್ತೆಯಾದ ಕಂತೆ ಕಂತೆ ಹಣ ಈಗ ವಿಪಕ್ಷಗಳ ವಾಕ್ಪ್ರಹಾರಕ್ಕೆ ಕಾರಣವಾಗಿದೆ.
ಪಂಚ ರಾಜ್ಯ ಚುನಾವಣೆ ಘೋಷಣೆ ಹಿನ್ನಲೆಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಹಣ ಸಂಗ್ರಹ ಮಾಡುತ್ತಿದೆ ಎಂದು ಬಿಜೆಪಿ, ಜೆಡಿಎಸ್ ವಾಗ್ದಾಳಿ ನಡೆಸಿದೆ. ಗುತ್ತಿಗೆದಾರರನ್ನು ಬಳಸಿಕೊಂಡು ಕಾಂಗ್ರೆಸ್ ಹಣ ಸಂಗ್ರಹಣೆ ಮಾಡುತ್ತಿದೆ ಎಂದು ಆರೋಪಿಸಿವೆ.
ಆದರೆ ಆರೋಪ ನಿರಾಕರಿಸುವ ಸಿಎಂ ಸಿದ್ದರಾಮಯ್ಯ ಪಂಚ ರಾಜ್ಯದ ಚುನಾವಣೆ ಹಿನ್ನಲೆಯಲ್ಲಿ ರಾಜ್ಯದಿಂದ ಹಣ ಹೋಗುತ್ತಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ನಾವು ದುಡ್ಡು ಕಳುಹಿಸುತ್ತಿದೆ ಎಂದು ಆರೋಪ ಮಾಡಿದವರು ನಾವು ಕಳುಹಿಸುವುದನ್ನು ನೋಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆ ಈ ಐಟಿ ದಾಳಿ ಆಡಳಿತ-ವಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ.