ಹಕ್ಕಿ ಜ್ವರ ಇಫೆಕ್ಟ್: ಚಿಕನ್ ಅಂದ್ರೆ ಬೇಡಪ್ಪಾ ಎನ್ನುತ್ತಿರುವ ಜನ, ಮಟನ್ ಗೆ ಭಾರೀ ಡಿಮ್ಯಾಂಡ್

Krishnaveni K
ಸೋಮವಾರ, 3 ಮಾರ್ಚ್ 2025 (09:57 IST)
ಬೆಂಗಳೂರು: ರಾಜ್ಯದಲ್ಲಿ ಈಗ ಹಕ್ಕಿ ಜ್ವರ ಭೀತಿ ಕಾಣಿಸಿಕೊಂಡಿದ್ದು, ಜನ ಕೋಳಿ ಮಾಂಸ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ನಡುವೆ ಮಟನ್ ಗೆ ಭಾರೀ ಡಿಮ್ಯಾಂಡ್ ಬಂದಿದೆ.

ರಾಯಚೂರು, ಬಳ್ಳಾರಿ, ಚಿಕ್ಕಬಳ್ಳಾಪುರ ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಸಾವಿರಾರು ಕೋಳಿಗಳ ಮಾರಣಹೋಮ ನಡೆಸಲಾಗಿದೆ. ಅಲ್ಲದೆ ಚಿಕನ್ ಉತ್ಪನ್ನಗಳಿಗೂ ನಿರ್ಬಂಧ ವಿಧಿಸಲಾಗಿದೆ.

ಈ ನಡುವೆ ಜನರೇ ಸ್ವಯಂ ಪ್ರೇರಿತರಾಗಿ ಚಿಕನ್ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಈಗ ಚಿಕನ್ ಗೆ ಬೇಡಿಕೆ ಕುಸಿದಿದೆ. ಆದರೆ ಮಾಂಸಪ್ರಿಯರು ಮಟನ್ ಖರೀದಿಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಈ ಕಾರಣಕ್ಕೆ ಮಟನ್ ಬೆಲೆಯಲ್ಲಿ ಏರಿಕೆಯಾಗಿದೆ.

ಚಿಕನ್ ಗೆ ಪ್ರತೀ ಕೆ.ಜಿ.ಗೆ 20 ರಿಂದ 40 ರೂ.ಗಳಷ್ಟು ಇಳಿಕೆಯಾಗಿದ್ದರೆ ಮಟನ್ ಗೆ 50 ರೂ.ಗಳಷ್ಟು ಏರಿಕೆಯಾಗಿದೆ. ದರ ಏರಿಕೆಯಾಗಿದ್ದರೂ ಮಾಂಸ ತಿನ್ನದೇ ಇರಲಾರೆ ಎನ್ನುವವರು ದುಬಾರಿ ಬೆಲೆ ಕೊಟ್ಟಾದರೂ ಖರೀದಿ ಮಾಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟದ ಬೆನ್ನಲ್ಲೇ ಮಾಜಿ ಸಿಎಂ ಸದಾನಂದ ಗೌಡ ಸ್ಫೋಟಕ ಹೇಳಿಕೆ

ದೆಹಲಿ ಬಾಂಬ್ ಸ್ಫೋಟ, ತನಿಖೆಯಲ್ಲಿ ಮಹತ್ವದ ಬೆಳವಣಿಗೆ

ಈ ನಾಯಕ ಸಿಎಂ ಆದ್ರೆ ಒಳ್ಳೆಯದು ಎಂದಾ ಕೈ ಶಾಸಕ ಹೆಚ್‌ವಿ ವೆಂಕಟೇಶ್‌

ಸಿಎಂ ಕುರ್ಚಿಗಾಗಿ ಗುದ್ದಾಟ, ಡಿಕೆ ಶಿವಕುಮಾರ್ ಮನೆಗೆ ಪ್ರವೇಶಿಸಿದ ಅಜ್ಜಯ್ಯ

ಪೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀಗೆ ಢವಢವ, ಆರೋಪ ಸಾಬೀತಾದಲ್ಲಿ ಎಷ್ಟು ವರ್ಷ ಜೈಲು ಗೊತ್ತಾ

ಮುಂದಿನ ಸುದ್ದಿ
Show comments