Webdunia - Bharat's app for daily news and videos

Install App

ಮಾಂಸ, ಮೊಟ್ಟೆ ಪ್ರಿಯರಿಗೆ ಬಿಗ್ ಶಾಕ್...!

Webdunia
ಗುರುವಾರ, 29 ಜೂನ್ 2023 (21:19 IST)
ಇಂಧನ, ತರಕಾರಿ ದರ ಏರಿಕೆ ಬೆನ್ನಲ್ಲೇ ಚಿಕನ್, ಎಗ್ ದರ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ.ಇದೇ ಮೊದಲ ಬಾರಿಗೆ ಅತ್ಯಧಿಕ ದರ ಏರಿಕೆಯಾಗಿದ್ದು,ಒಂದು ಮೊಟ್ಟೆ 7 ರೂ. ಚಿಲ್ಲರೆ ವ್ಯಾಪಾರವಾಗಿದೆ.ಒಂದು ಕೆ.ಜಿ ಚಿಕನ್ 230 ರೂ. ದಾಟಿದೆ.ಕಳೆದೊಂದು ತಿಂಗಳಿನಿಂದ ನಿರಂತರ ಬೆಲೆ ಏರಿಕೆಯಾಗಿದೆ.
 
ಮೊಟ್ಟೆ, ಕೋಳಿ ಉತ್ಪಾದನೆ ಇಳಿಮುಖವಾಗಿದ್ದು,ಬೇಡಿಕೆಯಷ್ಟು ಪೂರೈಕೆ ಆಗದ ಕಾರಣ ದರ ಹೆಚ್ಚಿದೆ.ಹಿಂದೆಂದೂ ಕಾಣದ ಈ ತೆರನಾದ ದರ ಏರಿಕೆಯಾಗಿದೆ.ರಾಜ್ಯಕ್ಕೆ ದಿನವೊಂದಕ್ಕೆ 1.5 ಕೋಟಿ ಮೊಟ್ಟೆ ಪೂರೈಕೆಯಾಗಿದ್ದು,ಬೆಂಗಳೂರಿಗೆ 75 ಲಕ್ಷ ಮೊಟ್ಟೆ ಅಗತ್ಯವಿದೆ.
 
ರಾಜ್ಯದ ಮೊಟ್ಟೆ, ಚಿಕನ್ ಹೊರ ರಾಜ್ಯಕ್ಕೂ ರಫ್ತಾಗುತ್ತೆ.ಬೇಸಿಗೆ ಕಾರಣಕ್ಕೆ ಫಾರ್ಮ್ ಕೋಳಿ ಉತ್ಪಾದನೆ ಕಡಿಮೆಯಾಗಿದೆ.ಹವಾಮಾನ ವೈಪರೀತ್ಯ, ಎಲ್ಲ ದರ ಏರಿಕೆ ಪರಿಣಾಮವಾಗಿದೆ.ಮೊಟ್ಟೆ, ಕೋಳಿ ದರ ದಾಖಲೆ ಮಟ್ಟಕ್ಕೆ ಏರಿಕೆಯಾಗಿದ್ದು,ಇನ್ನೊಂದು ತಿಂಗಳು ಇದೇ ದರ ಇರುವ ಸಾಧ್ಯತೆ ಇದೆ ಎಂದು ಕರ್ನಾಟಕ ಸಹಕಾರ ಕುಕ್ಕಟ ನಿಯಮಿತ ಅಧ್ಯಕ್ಷ ಕಾಂತರಾಜ್ ಹೇಳಿದ್ದಾರೆ.
 
ಯಾವ ಯಾವ ದರ ಎಲ್ಲೇಲ್ಲಿ ಎಷ್ಟು ಅಂತಾ ನೋಡುವುದಾದ್ರೆ
 
ತಿಂಗಳು - ಮೊಟ್ಟೆ ಫಾರ್ಮ್ ದರ - ಚಿಲ್ಲರೆ ದರ
 
ಮಾರ್ಚ್  - 4 ರೂ. - 5 ರೂ.
ಏಪ್ರಿಲ್ -  4.45 ರೂ. - 5.55 ರೂ.
ಮೇ - 5.55 ರೂ. - 6.55 ರೂ.
ಜೂನ್ -  6.00 ರೂ. - 7 ರೂ.
 
 
ತಿಂಗಳು - ಚಿಕನ್ ಫಾರ್ಮ್ ದರ - ಚಿಲ್ಲರೆ ದರ
ಮಾರ್ಚ್ - 120 ರೂ. - 155 + ರೂ.
ಏಪ್ರಿಲ್ - 140 ರೂ. - 175 + ರೂ.
ಮೇ - 180 ರೂ. - 210 + ರೂ.
ಜೂನ್ - 130  ರೂ. - 165 + ರೂಪಾಯಿಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments