Select Your Language

Notifications

webdunia
webdunia
webdunia
webdunia

ಸರ್ಕಾರ ರಚನೆಗೆ ಮುಂದಾದ ಬಿಜೆಪಿಯವರಿಗೆ ಬಿಗ್ ಶಾಕ್; ಅತೃಪ್ತರ ಸೇರ್ಪಡೆಗೆ ಪಕ್ಷದಿಂದ ವಿರೋಧ

ಸರ್ಕಾರ ರಚನೆಗೆ ಮುಂದಾದ ಬಿಜೆಪಿಯವರಿಗೆ ಬಿಗ್ ಶಾಕ್; ಅತೃಪ್ತರ ಸೇರ್ಪಡೆಗೆ ಪಕ್ಷದಿಂದ ವಿರೋಧ
ಬೆಂಗಳೂರು , ಮಂಗಳವಾರ, 9 ಜುಲೈ 2019 (10:23 IST)
ಬೆಂಗಳೂರು : ಮೈತ್ರಿ ಸರ್ಕಾರದ ಕೆಲವು ನಾಯಕರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಸರ್ಕಾರ ನಡೆಸಬೇಕೆಂದುಕೊಂಡಿದ್ದ ಬಿಜೆಪಿಯವರಿಗೆ ಇದೀಗ ಬಿಗ್ ಶಾಕ್ ಕಾದಿದೆ.




ಹೌದು. ಕೆಲವು ಅತೃಪ್ತ ಶಾಸಕರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲು ಪಕ್ಷದಲ್ಲೇ ವಿರೋಧ ವ್ಯಕ್ತವಾಗಿದೆ. ನಾಲ್ವರು ಅತೃಪ್ತ ಶಾಸಕರಾದ ಮುನಿರತ್ನ, ಭೈರತಿ ಬಸವರಾಜು, ಎಸ್.ಟಿ.ಸೋಮಶೇಖರ್, ಅಂಜಲಿ ನಿಂಬಾಳ್ಕರ್ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊ‍ಳ್ಳಲು ಪಕ್ಷದ ಕೆಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ನಾಲ್ವರು ಸದಸ್ಯತ್ವ ಅಭಯಾನ ನಿಲ್ಲಿಸಿ ಖಾನಪುರ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ.


ಅಲ್ಲದೇ ಮತ್ತೊಂದೆಡೆ ಆರ್.ಎಸ್.ಎಸ್ ನಿಂದಲೂ ಅಪರೇಷನ್ ಗೆ ವಿರೋಧ ವ್ಯಕ್ತವಾಗಿದ್ದು, ಈ ಬಗ್ಗೆ ನಿನ್ನೆ ರಾತ್ರಿ ಬೆಂಗಳೂರಿನ ಆರ್.ಎಸ್.ಎಸ್ ಕಚೇರಿಯಲ್ಲಿ ನಾಯಕರು ಸಭೆ ನಡೆಸಿದ್ದು, ನಾಲ್ವರು ಅತೃಪ್ತ ಶಾಸಕರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಇಡೀ ಬೆಳವಣಿಗೆಯಿಂದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸಂಪೂರ್ಣವಾಗಿ ದೂರ ಉಳಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದ ಬಿಜೆಪಿ ನಾಯಕರ ಸರ್ಕಾರದ ರಚನೆ ಆಸೆಗೆ ತಣ್ಣೀರೆರಚಿದಂತಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕರ ರಾಜೀನಾಮೆ ವಿಚಾರ; ಮತದಾರರ ಅಭಿಪ್ರಾಯವನ್ನು ಸಂಗ್ರಹಿಸಲಿರುವ ಸ್ಪೀಕರ್