Webdunia - Bharat's app for daily news and videos

Install App

ಚಿನ್ನ ಕೊಳ್ಳುವ ಮುನ್ನ ಎಚ್ಚರ

Webdunia
ಗುರುವಾರ, 3 ಫೆಬ್ರವರಿ 2022 (18:07 IST)
ಕಳಪೆ ಗುಣಮಟ್ಟದ ಚಿನ್ನವನ್ನು ಕರಗಿಸಿ ಬಿಸ್ಕೆಟ್‍ಗಳನ್ನು ಮಾಡಿ ಶುದ್ಧತೆಯ ಬಗ್ಗೆ ನಕಲಿ ಸೀಲ್‍ಗಳನ್ನು ಹಾಕಿ ಪರಿಶುದ್ಧ ಚಿನ್ನವೆಂದು ನಂಬಿಸಿ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ನಾಲ್ವರನ್ನು ಬಂಧಿಸಿದ್ದಾರೆ.ರಾಜೇಶ್ ಎಚ್.ಬೋಸ್ಲೆ (44), ಅಜಯ್ ಕಾಂತಿಲಾಲ್ ಕದಮ್ (19), ಅಕ್ಷಯ್ (26) ಮತ್ತು ಹೃತಿಕ್ ಬಾಬಾ ಸಾಹೇಬ್ ಸಾಲುಂಕಿ (19) ಬಂಧಿತ ಆರೋಪಿಗಳು.
 
ಬಂಧಿತರಿಂದ 1 ಕೆಜಿ, 790 ಗ್ರಾಂ ತೂಕದ ಚಿನ್ನ, 20 ಸಾವಿರ ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಪ್ರತಿಷ್ಠಿತ ಕಂಪೆನಿಗಳ ಶುದ್ಧತೆಯ ನಕಲಿ ಸೀಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ನಗರತ್ ಪೇಟೆ ಮುಖ್ಯರಸ್ತೆಯಲ್ಲಿರುವ ಮಾತಾಜಿ ಜ್ಯುವೆಲರಿ ಮಾರ್ಕೆಟ್ ಕಟ್ಟಡದಲ್ಲಿರುವ ಅಂಗಡಿಯಲ್ಲಿ ಕೆಲವರು ಓಸ್ಮಿಯೋಮ್ ಸ್ಪಾಂಜ್ ಬಳಸಿ ಕಲಬೆರಕೆ ಮಾಡಿ ಯಾವುದೇ ಪರವಾನಗಿ ಇಲ್ಲದೆ ಚಿನ್ನವನ್ನು ಕರಗಿಸಿ ಬಿಸ್ಕೆಟ್‍ಗಳನ್ನು ಮಾಡಿ ಚಿನ್ನ ಶುದ್ಧತೆ ಬಗ್ಗೆ ನಕಲಿ ಸೀಲ್‍ಗಳನ್ನು ಹಾಕಿ ಪರಿಶುದ್ಧ ಚಿನ್ನವೆಂದು ಮಾರಾಟ ಮಾಡುತ್ತಿದ್ದರು.
 
ಪ್ರತಿದಿನ 3 ರಿಂದ 5ಕೆಜಿಯಷ್ಟು ವಿಲೇವಾರಿ ಮಾಡುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಬಂದಿದೆ. ತಕ್ಷಣ ಸಿಸಿಬಿ ವಿಶೇಷ ವಿಚಾರಣಾ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಂಗಡಿ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿ ಕೃತ್ಯದಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ ಚಿನ್ನ, ಹಣ, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments