Daily Horoscope

Select Your Language

Notifications

webdunia
webdunia
webdunia
webdunia

ಬೆಂಗಳೂರಿಗರಿಗೆ ಮತ್ತೊಂದು ದರ ಏರಿಕೆ ಬರೆ: ಜಲಮಂಡಳಿಯಿಂದ ಶಾಕ್

Bengaluru Water Authority
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಜನತೆಗೆ ಮತ್ತೊಂದು ದರ ಏರಿಕೆ ಬರೆ ಹಾಕಲಾಗಿದೆ. ಜಲಮಂಡಳಿ ಸಿಲಿಕಾನ್ ಸಿಟಿ ಜನರಿಗೆ ಶಾಕ್ ಕೊಟ್ಟಿದೆ.

ಈಗಾಗಲೇ ಹಾಲು, ಬಸ್, ವಿದ್ಯುತ್ ದರ ಏರಿಕೆಯಿಂದ ಬೇಸತ್ತಿರುವ ಜನಕ್ಕೆ ಈಗ ನೀರಿನ ದರ ಏರಿಕೆ ಬರೆ ಹಾಕಲಾಗಿದೆ. ಏಪ್ರಿಲ್ 1 ರಿಂದ ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಮಾಡಲು ಜಲಮಂಡಳಿ ತೀರ್ಮಾನಿಸಿದೆ. ಅದರಂತೆ ಶೇ.3 ರಷ್ಟು ದರ ಏರಿಕೆಯಾಗಲಿದೆ.

ಸಮಿತಿ ಈಗಾಗಲೇ ನಿರ್ಧರಿಸಿದಂತೆ ದರ ಹೆಚ್ಚಿಸಲು ಜಲಮಂಡಳಿ ಮುಂದಾಗಿದೆ. ಇದರಿಂದ ಗೃಹ ಬಳಕೆ ನೀರಿಗೆ ಪ್ರತೀ ಲೀಟರ್ ಗೆ 1 ಪೈಸೆ ಮತ್ತು ವಾಣಿಜ್ಯ ಬಳಕೆದಾರರಿಗೆ 1.9 ಪೈಸೆಯಷ್ಟು ಪ್ರತೀ ಲೀಟರ್ ಗೆ ನೀರಿನ ದರ ಹೆಚ್ಚಳವಾಗಲಿದೆ. ಸ್ಯಾನಿಟರಿ ಚಾರ್ಜ್ ಕೂಡಾ ಹೆಚ್ಚು ಮಾಡಲಾಗಿದ್ದು ಬೋರ್ ವೆಲ್ ಇರೋ ಮನೆಗಳಿಗೆ 30 ರೂ. ಮತ್ತು ಕೈಗಾರಿಕೆಗಳಿಗೆ 120 ರೂ. ಚಾರ್ಜ್ ಆಗಲಿದೆ.

ಮೇ ತಿಂಗಳಿನಿಂದ ಹೊಸ ದರದಂತೆ ನಿಮ್ಮ ಮನೆಗೆ ಬಿಲ್ ಬರಲಿದೆ. ಜಲಮಂಡಳಿ ಈಗಾಗಲೇ ಪ್ರತೀ ವರ್ಷವೂ ನೀರಿನ ದರ ಹೆಚ್ಚಳ ಮಾಡಲು ತೀರ್ಮಾನಿಸಿದೆ. ಅದರಂತೆ ಈಗ ಹೊಸ ಆರ್ಥಿಕ ವರ್ಷದಿಂದ ದರ ಹೆಚ್ಚಳವಾಗಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೇರಳಂ ನರ್ಸ್ ರಾತ್ರಿಯಿಡೀ ಕೆಲಸ ಮಾಡ್ತಾರೆ ಎಂದ ರಾಹುಲ್ ಗಾಂಧಿ: ಎಲ್ಲಾ ನರ್ಸ್ ಗಳೂ ಹೀಗೇ ಎಂದ ನೆಟ್ಟಿಗರು