Select Your Language

Notifications

webdunia
webdunia
webdunia
webdunia

ಬೆಂಗಳೂರು ಸ್ಟಾರ್ಟ್‌ಅಪ್ ನಿಯೋ ಸ್ಯಾನ್ ನಿಂದ ಸೇಫ್‌ಡಿಸ್ಪೋಸ್ ಬೆಂಗಳೂರು ಯೋಜನೆಗೆ ಚಾಲನೆ

Neo space
ಬೆಂಗಳೂರು:  ಸ್ಥಳದಲ್ಲೇ ತ್ಯಾಜ್ಯ ವಿಲೇವಾರಿ ಮಾಡುವ ಉನ್ನತ ತಂತ್ರಜ್ಞಾನದ ಥರ್ಮಲ್ ವೇಸ್ಟ್-ಪ್ರೊಸೆಸರ್‌ಗಳನ್ನು ಅಭಿವೃದ್ಧಿಪಡಿಸುವ ಬೆಂಗಳೂರು ಮೂಲದ ಕ್ಲೀನ್-ಟೆಕ್ ಕಂಪನಿ 'ನಿಯೋ ಸ್ಯಾನ್', ತನ್ನ ಪೇಟೆಂಟ್ ಪಡೆದ ನಾವೀನ್ಯತೆಗಾಗಿ ವರ್ಲ್ಡ್ ಎಕನಾಮಿಕ್ ಫೋರಮ್‌ನ (WEF) 'ಅಪ್‌ಲಿಂಕ್' (UpLink) ನಿಂದ ಪ್ರಶಸ್ತಿ ಪಡೆದಿದೆ. ಬೆಳೆಯುತ್ತಿರುವ ನಮ್ಮ ನಗರಗಳ ವಿವಿಧ ಸವಾಲುಗಳನ್ನು ಎದುರಿಸುವ ಗುರಿಯೊಂದಿಗೆ ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ನಗರದ ವಿವಿಧ ಸೌಲಭ್ಯಗಳಲ್ಲಿ ಸ್ಥಳದಲ್ಲೇ ತ್ಯಾಜ್ಯ ನಿರ್ವಹಣೆ ಮಾಡಲು ನಿಯೋ ಸ್ಯಾನ್ ಅನ್ನು ಕಾರ್ಯತಂತ್ರದ ಪಾಲುದಾರರನ್ನಾಗಿ ಆಯ್ಕೆ ಮಾಡಲಾಗಿದೆ.
 
ಶೀಘ್ರದಲ್ಲೇ ಆರಂಭವಾಗಲಿರುವ ಈ ಯೋಜನೆಯು, ನಗರದಾದ್ಯಂತ ಇರುವ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ, ಸ್ಥಳದಲ್ಲೇ ಸ್ಯಾನಿಟರಿ ಮತ್ತು ಜೈವಿಕ-ವೈದ್ಯಕೀಯ ತ್ಯಾಜ್ಯಗಳನ್ನು ಸಂಸ್ಕರಿಸುವ ಪ್ರಮಾಣೀಕೃತ ವ್ಯವಸ್ಥೆಯನ್ನು ತರಲಿದ್ದು, ತ್ಯಾಜ್ಯ ನಿರ್ವಹಣೆಯ ಅತ್ಯಂತ ಸವಾಲಿನ ಸಮಸ್ಯೆಯನ್ನು ನಿವಾರಿಸಲಿದೆ.
 
'ಯೆಸ್/ಬೆಂಗಳೂರು ಅರ್ಬನ್ ಇನ್ನೋವೇಶನ್ ಚಾಲೆಂಜ್' ವಿಜೇತರಾಗಿರುವ ನಿಯೋ ಸ್ಯಾನ್, ವರ್ಲ್ಡ್ ಎಕನಾಮಿಕ್ ಫೋರಮ್‌ನ ಅಪ್‌ಲಿಂಕ್, ಯುನೈಟೆಡ್ ವೇ ಬೆಂಗಳೂರು, ಡೆಲಾಯ್ಟ್, ಆಂಥಿಲ್ ವೆಂಚರ್ಸ್, ಅಮೆಜಾನ್ ವೆಬ್ ಸರ್ವೀಸಸ್ (AWS), ಸಿಸ್ಕೋ, ಸೇಲ್ಸ್‌ಫೋರ್ಸ್, ಎಸ್‌ಎಪಿ (SAP), ಕರ್ನಾಟಕ ಸರ್ಕಾರ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಇತರ 15ಕ್ಕೂ ಹೆಚ್ಚು ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಈ ಯೋಜನೆಯು ಸುಸ್ಥಿರತೆ, ನೈರ್ಮಲ್ಯ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ವಿನೂತನ ಪರಿಹಾರಗಳನ್ನು ಬೆಂಬಲಿಸುತ್ತದೆ. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ನಂತರ ಈ ಜಾಗತಿಕ ಉಪಕ್ರಮಕ್ಕೆ ಆತಿಥ್ಯ ವಹಿಸುತ್ತಿರುವ ವಿಶ್ವದ ಎರಡನೇ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ.
 
ನಿಯೋ ಸ್ಯಾನ್‌ಗೆ ಒದಗಿಸಲಾದ ಅನುದಾನವನ್ನು 'ನಿಯೋ-ಎಕ್ಸ್' ಘಟಕಗಳ ಅಳವಡಿಕೆಗೆ ಬಳಸಿಕೊಳ್ಳಲಾಗುವುದು. ಇವು ತ್ಯಾಜ್ಯ ಉತ್ಪತ್ತಿಯಾಗುವ ಸ್ಥಳದಲ್ಲೇ ಅದನ್ನು ಸುರಕ್ಷಿತವಾಗಿ ಸಂಸ್ಕರಿಸುತ್ತವೆ. ಬೆಂಗಳೂರಿನಾದ್ಯಂತ ಇರುವ ಕಾಲೇಜುಗಳು, ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHCs), ಮಹಿಳಾ ಹಾಸ್ಟೆಲ್‌ಗಳು, ಸರ್ಕಾರಿ ವಸತಿ ಸಮುಚ್ಚಯಗಳು ಮತ್ತು ಇತರ ಕಟ್ಟಡಗಳಲ್ಲಿ ಹಂತಹಂತವಾಗಿ ಈ ಯಂತ್ರಗಳನ್ನು ಅಳವಡಿಸಲಾಗುವುದು. ಇದರಿಂದ 5,000ಕ್ಕೂ ಹೆಚ್ಚು ಮಹಿಳೆಯರಿಗೆ ಅನುಕೂಲವಾಗಲಿದೆ. ಅಲ್ಲದೆ, ಅಪಾಯಕಾರಿ ತ್ಯಾಜ್ಯವನ್ನು ಕೈಯಾರೆ ವಿಂಗಡಿಸುವ ಪೌರಕಾರ್ಮಿಕರಿಗೆ ಸುರಕ್ಷತೆ ಮತ್ತು ಘನತೆ ಒದಗಿಸಲಿದೆ.
 
ಸರ್ಕಾರಿ ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಮಹಿಳಾ ಹಾಸ್ಟೆಲ್‌ಗಳಲ್ಲಿ ನಿತ್ಯವೂ ಸ್ಯಾನಿಟರಿ ಪ್ಯಾಡ್‌ಗಳು, ಬ್ಯಾಂಡೇಜ್‌ಗಳು, ಬಳಸಿದ ಟಿಶ್ಯೂಗಳು ಮತ್ತು ಕ್ಲಿನಿಕಲ್ ತ್ಯಾಜ್ಯಗಳು ಉತ್ಪತ್ತಿಯಾಗುತ್ತಿವೆ. ಆದರೆ, ಇವುಗಳ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇರದ ಕಾರಣ, ಇವುಗಳನ್ನು ಬಯಲಿನಲ್ಲಿ ಸುಡುವುದು ಸಾಮಾನ್ಯವಾಗಿತ್ತು. ಬೆಂಗಳೂರಿನ ಒಟ್ಟು PM2.5 ಮಾಲಿನ್ಯದಲ್ಲಿ ಶೇ.11 ರಷ್ಟು ಪಾಲು ಈ ರೀತಿ ತ್ಯಾಜ್ಯ ಸುಡುವುದರಿಂದಲೇ ಆಗುತ್ತಿದ್ದು, ವಾಹನ ಮತ್ತು ಕೈಗಾರಿಕೆಗಳ ನಂತರ ಇದು ನಗರದ ಮೂರನೇ ಅತಿದೊಡ್ಡ ಮಾಲಿನ್ಯ ಮೂಲವಾಗಿದೆ. ಸ್ವಚ್ಛತಾ ಕಾರ್ಮಿಕರು ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಇದನ್ನು ನಿರ್ವಹಿಸುತ್ತಿದ್ದರು. ನಿಯೋ ಸ್ಯಾನ್ ಈ ಸಮಸ್ಯೆಯನ್ನು ಪರಿಸರ ಸಂರಕ್ಷಣೆ ಮತ್ತು ಮಹಿಳಾ ಸಬಲೀಕರಣದ ದೃಷ್ಟಿಕೋನದಿಂದ ಪರಿಹರಿಸುತ್ತಿದ್ದು, ಸಾರ್ವಜನಿಕ ಆರೋಗ್ಯ, ಕಾರ್ಮಿಕರ ಘನತೆ ಮತ್ತು ಶುದ್ಧ ಗಾಳಿಯ ನಡುವಿನ ಅಂತರವನ್ನು ತುಂಬುತ್ತಿದೆ.
 
ಪ್ರತಿಯೊಂದು 'ನಿಯೋ-ಎಕ್ಸ್' ಘಟಕವು ಪ್ರತಿ ಸಂಸ್ಕರಣಾ ವರ್ತುಲ ಮತ್ತು ಸಂಸ್ಕರಿಸಲಾದ ಪ್ರತಿಯೊಂದು ಕಿಲೋ ತ್ಯಾಜ್ಯದ ನೈಜ-ಸಮಯದ (IoT) ಡೇಟಾವನ್ನು ದಾಖಲಿಸುತ್ತದೆ. ಇದು ನಗರ ಯೋಜನೆಗೆ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ. ಬಯಲಿನಲ್ಲಿ ತ್ಯಾಜ್ಯ ಸುಡುವುದನ್ನು ತಡೆಗಟ್ಟುವುದು, ಮೂಲದಲ್ಲೇ ತ್ಯಾಜ್ಯ ವಿಂಗಡಣೆ ಕಾರ್ಯಾಗಾರಗಳನ್ನು ನಡೆಸುವುದು ಮತ್ತು 'ಘನ ತ್ಯಾಜ್ಯ ನಿರ್ವಹಣಾ ನಿಯಮಗಳು 2026'ರ ಅಡಿಯಲ್ಲಿ ಭಾರತದ ಮೊಟ್ಟಮೊದಲ ಕ್ಷೇತ್ರ-ಪರಿಶೀಲಿಸಿದ ಡೇಟಾವನ್ನು ಸೃಷ್ಟಿಸುವುದು ಈ ಉಪಕ್ರಮದ ಗುರಿಯಾಗಿದೆ. ನಗರದಾದ್ಯಂತ ಈ ತಂತ್ರಜ್ಞಾನವನ್ನು ಅಳವಡಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಪರಿಶೀಲಿಸಿ, ಅನುಮೋದನೆ ನೀಡಿದೆ.
 
ಈ ಯೋಜನೆಯ ಕುರಿತು ಮಾತನಾಡಿದ 'ನಿಯೋ ಸ್ಯಾನ್' ಸಂಸ್ಥಾಪಕ ಧ್ವಜ್ ಬಗ್ರೆಚಾ, "ತ್ಯಾಜ್ಯ ಮೂಲಸೌಕರ್ಯದಲ್ಲಿ ಯಾರೂ ಗಮನಿಸದ ದೊಡ್ಡ ಕೊರತೆಯಿದೆ. ಮೂರನೇ ವಿಭಾಗವಾದ - ಸ್ಯಾನಿಟರಿ, ಜೈವಿಕ-ವೈದ್ಯಕೀಯ ತ್ಯಾಜ್ಯವು ಪ್ರತಿದಿನ ಉತ್ಪತ್ತಿಯಾಗುತ್ತಿದ್ದರೂ, ಅದನ್ನು ಸ್ಥಳದಲ್ಲೇ ವಿಲೇವಾರಿ ಮಾಡುವ ವ್ಯವಸ್ಥೆ ಇಲ್ಲ. ಇದರಿಂದ ಆರ್ಥಿಕ ಲಾಭವಿಲ್ಲದ ಕಾರಣ, ಬಯಲಿನಲ್ಲಿ ಸುಡುವುದು ಅಥವಾ ಎಲ್ಲೆಂದರಲ್ಲಿ ಎಸೆಯುವುದು ಸಾಮಾನ್ಯವಾಗಿಬಿಟ್ಟಿದೆ. ಇದರಿಂದ ಗಾಳಿ, ಜಲಮೂಲಗಳು ಮತ್ತು ಮಣ್ಣಿನ ಗುಣಮಟ್ಟ ಹಾಳಾಗುತ್ತಿದೆ. ನೈರ್ಮಲ್ಯ ಕಾರ್ಮಿಕರು ಇದನ್ನು ಕೈಯಾರೆ ನಿರ್ವಹಿಸುವುದರಿಂದ ಆರೋಗ್ಯದ ಅಪಾಯಗಳು ಎದುರಾಗುತ್ತಿವೆ. 'ಸೇಫ್‌ಡಿಸ್ಪೋಸ್ ಬೆಂಗಳೂರು' ಈ ಅಂತರವನ್ನು ಮುಚ್ಚುವ ನಿಟ್ಟಿನಲ್ಲಿ ಪ್ರಾಯೋಗಿಕ ಹೆಜ್ಜೆಯಾಗಿದೆ. ತ್ಯಾಜ್ಯವನ್ನು ನಿಯಂತ್ರಿತ ರೀತಿಯಲ್ಲಿ ಸ್ಥಳದಲ್ಲೇ ಸಂಸ್ಕರಿಸುವುದು, ಬಯಲಿನಲ್ಲಿ ಸುಡುವುದನ್ನು ತಡೆಯುವುದು ಮತ್ತು ಮಾಲಿನ್ಯ ಹೊರಸೂಸುವಿಕೆಯನ್ನು ಶೇ.98 ರಷ್ಟು ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ," ಎಂದು ತಿಳಿಸಿದರು.
 
ಎಸ್‌ಎಪಿ ಇಂಡಿಯಾ (SAP India), ತಾಜ್ ಹೋಟೆಲ್ಸ್, ಏರ್‌ಟೆಲ್, ರಾಯಲ್ ಎನ್‌ಫೀಲ್ಡ್, ಆರ್‌ಎಂಝಡ್ (RMZ), ಎಂಬೆಸಿ ಗ್ರೂಪ್ ಸೇರಿದಂತೆ ಭಾರತದಾದ್ಯಂತ ಪ್ರಸ್ತುತ 200ಕ್ಕೂ ಹೆಚ್ಚು ಯಂತ್ರಗಳನ್ನು ನಿರ್ವಹಣಾ ಸೇವಾ ಒಪ್ಪಂದಗಳ ಅಡಿಯಲ್ಲಿ ಅಳವಡಿಸಲಾಗಿದೆ. 'ನಿಯೋ ಸ್ಯಾನ್' ಇದೀಗ ಸರ್ಕಾರಿ ಮತ್ತು ಸಾಂಸ್ಥಿಕ ಮೂಲಸೌಕರ್ಯಗಳಾದ್ಯಂತ ತನ್ನ ಸೇವೆಯನ್ನು ವಿಸ್ತರಿಸುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅಧಿಕೃತವಾಗಿ ರಾಜೀನಾಮೆ